ಮಾತಿನ ಚಕಮಕಿ ವೇಳೆ ಶಾಸಕರ ನಡುವೆ ಗುದ್ದಾಟ : ಚಪ್ಪಲಿ ಕೈಗೆತ್ತಿಕೊಂಡ ಹಾಲಿ ಶಾಸಕ..!

suddionenews
1 Min Read

ವಿಜಯನಗರ: ಪುರಸಭೆ ಚುನಾವಣೆ ವೇಳೆ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಹಾಲಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಕೈಗೆ ಚಪ್ಪಲಿ ತೆಗೆದುಕೊಂಡಿರುವ ಘಟನೆ ನಡೆದಿದೆ.

ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆಯ ವೇಳೆ ಈ ಘಟನೆ ನಡೆದಿದೆ. ಮತದಾನದ ವೇಳೆ 10ನೇ ವಾರ್ಡ್ ನ ಮತಗಟ್ಟೆಯ ಆವರಣಕ್ಕೆ ಉಭಯ ನಾಯಕರು ತಮ್ಮ ಬೆಂಬಲಿಗರೊಂದಿಗೆ ಬಂದಿದ್ದಾರೆ. ಆ ಬಳಿಕ 21ನೇ ವಾರ್ಡ್ ಗೆ ಇಬ್ಬರ ಬೆಂಬಲಿಗರು ಬಂದಿದ್ದಾರೆ. ಈ ವೇಳೆ ಹಾಲಿ ಶಾಸಕ ಭೀಮಾ ನಾಯ್ಕ್ ಪೊಲೀಸರಿಗೆ ಏರುಧ್ವನಿಯಲ್ಲಿ ಹೇಳಿದ್ದಾರೆ.

ಇದರಿಂದ ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಹಾಲಿ ಶಾಸಕ ಭೀಮಾನಾಯ್ಕ್ ಚಪ್ಪಲಿ ಕಳಚಿ ಎದುರುಗಡೆಯವರಿಗೆ ಹೊಡೆಯಲು ಹೋಗಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧ ಪ್ರತ್ಯೇಕ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *