ಲಖನೌ: 2019ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುವುದಾಗಿ ಚಂದ್ರಶೇಖರ್ ಆಜಾದ್ ಘೋಷಿಸಿದ್ದರು. ಆದ್ರೆ ಅದೇಕೋ ಬಳಿಕ ಆ ವಿಚಾರವಾಗಿ ಯೂಟರ್ನ್ ತೆಗೆದುಕೊಂಡಿದ್ದರು. ಇದೀಗ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ವಿರುದ್ಧ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಯೋಗಿ ಆದಿತ್ಯಾನಾಥ್ ವಿಧಾನಸಭೆಯಲ್ಲಿ ಇರಬಾರದು ಅನ್ನೋದು ನಂಗೆ ಮುಖ್ಯ. ಹೀಗಾಗಿ ಅವರು ಎಲ್ಲಿ ಸ್ಪರ್ಧಿಸುತ್ತಾರೊ ಅಲ್ಲಿಯೆ ನಾನು ಸ್ಪರ್ಧಿಸುತ್ತೇನೆ. ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ದಲಿತರು, ಮುಸ್ಲಿಂರು, ಹಿಂದುಳಿದವರನ್ನು ಅಲ್ಲೆಲ್ಲಾ ಕಣಕ್ಕಿಳಿಸುತ್ತೇವೆ. ನಾನು ಬಿಜೆಪಿಯನ್ನು ತಡೆಯಬೇಕು ಮತ್ತು ಅದಕ್ಕಾಗಿ ನಾನು ಅವರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ತಡೆಯಲು ಬಯಸುತ್ತೇನೆ. ಒಂದೋ ಬೆಹೆನ್ಜಿ (ಮಾಯಾವತಿ) ಜತೆ ಹೋರಾಡಬೇಕು ಅಥವಾ ಅವರು ನನಗೆ ಬಿಡಬೇಕು. ನಾನು ಬಲಶಾಲಿ ಮತ್ತು ನಾನು ಯೋಗಿ ಆದಿತ್ಯನಾಥ ಅವರನ್ನು ಎದುರಿಸಬಲ್ಲೆ ಎಂದಿದ್ದಾರೆ.
ಇನ್ನು ಪಿಎಂ ಮೋದಿ ವಿರುದ್ಧ ಚುನಾವಣೆಗೆ ಸ್ಪರ್ಧೆ ಘೋಷಿಸಿ, ಹಿಂದೆ ಸರಿದಿದ್ದಕ್ಕೂ ಕಾರಣ ನೀಡಿರುವ ಚಂದ್ರಶೇಖರ್ ಆಜಾದ್, ಆ ಸಮಯದಲ್ಲಕ ನನ್ನ ಬಳಿ ಯಾವ ಪಕ್ಷವು ಇರಲಿಲ್ಲ. ಆದ್ರೆ ಈ ಬಾರಿ ನಾನು ಆಜಾದ್ ಪಕ್ಷವನ್ನ ಹೊಂದಿದ್ದೇನೆ. ಹೀಗಾಗಿ ಸ್ಪರ್ಧಿಸೋದು ಖಚಿತ ಎಂದಿದ್ದಾರೆ.