ಚಿತ್ರದುರ್ಗ, (ಅ.07) : ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ಜಿಲ್ಲೆಗೆ ಆಗಮಿಸಲಿದ್ದು, ಸೆಪ್ಟೆಂಬರ್ 10 ಎಂಟ್ರಿ ಕೊಡಲಿದೆ. ಹಾಗಾದರೆ ಈ ಯಾತ್ರೆ ಹೇಗೆ ಸಾಗುತ್ತದೆ ಎಂಬ ಪೂರ್ಣ ವಿವರ ಇಲ್ಲಿದೆ. ಜಿಲ್ಲೆಯ ವೇಳಾಪಟ್ಟಿ ಈ ಕೆಳಗಿನಂತಿದೆ.
ದಿನಾಂಕ:10-10-2022 ಸೋಮವಾರ 11 ನೇ ದಿನದ ಪಾದಯಾತ್ರೆ
ಹಿರಿಯೂರು ಸಂಜೆ 4 ಗಂಟೆಗೆ ತಾಹಾ ಪ್ಯಾಲೇಸ್ ಬಳಿ ಆಗಮನ, ಸಂಜೆ 7 ಗಂಟೆಗೆ ಬಾಳೇನಹಳ್ಳಿ ಹರ್ತಿಕೋಟೆ ಗ್ರಾಮದಲ್ಲಿ ತಂಗುವುದು.
ದಿನಾಂಕ:11-10-2022 ಮಂಗಳವಾರ 12 ನೇ ದಿನದ ಪಾದಯಾತ್ರೆ
ಬೆಳಗ್ಗೆ 6.30 ಗಂಟೆಗೆ ಹರ್ತಿಕೋಟೆ ಗ್ರಾಮದಿಂದ ಪಾದಯಾತ್ರೆ ಆರಂಭಗೊಂಡು ಬೆಳಗ್ಗೆ 11 ಗಂಟೆಗೆ ಹೋಟೆಲ್ ಚೇತನ್ ಹತ್ತಿರ, ಸಾಣಿಕೆರೆಯಲ್ಲಿ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಸಾಣಿಕೆರೆಯಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಎಸ್.ಆರ್.ಎಸ್ ಶಾಲೆ ಆವರಣ ಚಳ್ಳಕೆರೆ ಟೌನ್ ಇಲ್ಲಿ ತಂಗುವುದು.
ದಿನಾಂಕ:12-10-2022 ಬುಧವಾರ 13 ನೇ ದಿನದ ಪಾದಯಾತ್ರೆ
ಬೆಳಗ್ಗೆ 6.30 ಗಂಟೆಗೆ ಎಸ್.ಆರ್.ಎಸ್ ಶಾಲೆ, ಚಳ್ಳಕೆರೆ ಟೌನ್‌ನಿಂದ ಪಾದಯಾತ್ರೆ ಆರಂಭಗೊಂಡು ಬೆಳಗ್ಗೆ 11 ಗಂಟೆಗೆ ಗಿರಿಯಮ್ಮನಹಳ್ಳಿ ಗೇಟ್ ಇಲ್ಲಿ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಗಿರಿಯಮ್ಮನಹಳ್ಳಿ ಗೇಟ್‌ನಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಹಿರೇಹಳ್ಳಿ ಟೋಲ್ ಪ್ಲಾಜಾ, ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಶಾಲೆ, ಹಿರೇಹಳ್ಳಿ, ಮೊಳಕಾಲ್ಮೂರು ಕ್ಷೇತ್ರ ಇಲ್ಲಿ ತಂಗುವುದು.
ದಿನಾಂಕ:13-10-2022 ಗುರುವಾರ 14 ನೇ ದಿನದ ಪಾದಯಾತ್ರೆ
ಬೆಳಗ್ಗೆ 6.30 ಗಂಟೆಗೆ ಬಿ.ಜಿ.ಕೆರೆ ಅಂಡರ್‌ಪಾಸ್, ಬೊಮ್ಮಗೊಂಡನಕೆರೆ ಇಲ್ಲಿಂದ ಪಾದಯಾತ್ರೆ ಆರಂಭಗೊಂಡು ಬೆಳಗ್ಗೆ 11 ಗಂಟೆ ಕೋನಸಾಗರ ಗ್ರಾಮದ ಹತ್ತಿರ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಕೋನಸಾಗರದಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಮೊಳಕಾಲ್ಮುರು ಕಾಂಗ್ರೆಸ್ ಕಛೇರಿಯವರೆಗೆ ನಂತರ ರಾಂಪುರ ಹತ್ತಿರ ತಂಗುವುದು.
ದಿನಾಂಕ:14-10-2022 ಶುಕ್ರವಾರ 15 ನೇ ದಿನದ ಪಾದಯಾತ್ರೆ
ಬೆಳಗ್ಗೆ 6.30 ಗಂಟೆಗೆ ರಾಂಪುರದಿಂದ ಪಾದಯಾತ್ರೆ ಆರಂಭಗೊಂಡು ಬೆಳಗ್ಗೆ 11 ಗಂಟೆ ಕುಂಟುಮಾರಮ್ಮ ದೇವಸ್ಥಾನ, ಟೋಲ್ ಹತ್ತಿರ, ಆಂದ್ರ ಪ್ರದೇಶ ದಲ್ಲಿ ಊಟ ಮತ್ತು ವಿಶ್ರಾಂತಿ ಸಂಜೆ 4 ಗಂಟೆಗೆ ಕುಂಟುಮಾರಮ್ಮ ದೇವಸ್ಥಾನದಿಂದ ಪಾದಯಾತ್ರೆ ಸಾಗಿ ಸಂಜೆ 7 ಗಂಟೆಗೆ ಹೆಚ್.ಪಿ ಪೆಟ್ರೋಲ್ ಪಂಪ್ ಹತ್ತಿರ, ಓಬಳಾಪುರಂ ಗ್ರಾಮ, ಹಲಕುಂದಿ ಮಠದ ಹತ್ತಿರ, ಬಳ್ಳಾರಿ ಜಿಲ್ಲೆಯಲ್ಲಿ ತಂಗುವುದು.