ಬರುತ್ತಿದೆ ಭಾರತ್ ಅಕ್ಕಿ : ಕೆಜಿ ಬೆಲೆ ಎಷ್ಟು ಗೊತ್ತಾ ?

 

ಸುದ್ದಿಒನ್ : 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಸರ್ಕಾರವು ಭಾರತ್ ಅಕ್ಕಿಯನ್ನು ಪರಿಚಯಿಸುವ ಸಾಧ್ಯತೆಯಿದೆ. ಭಾರತ್ ಬ್ರಾಂಡ್‌ನ ಕೈಗೆಟುಕುವ ಧಾನ್ಯಗಳು ಮತ್ತು ಬೇಳೆಕಾಳುಗಳ ಅಡಿಯಲ್ಲಿ ಅಕ್ಕಿಯನ್ನು ಮಾರಾಟ ಮಾಡುವ ಸಾಧ್ಯತೆಯಿದೆ,

ನಿರಂತರವಾಗಿ ಏರುತ್ತಿರುವ ಅಕ್ಕಿ ಬೆಲೆಗಳನ್ನು ನಿಯಂತ್ರಿಸಲು, ಸರ್ಕಾರವು ಭಾರತ್ ಬ್ರಾಂಡ್ ಅಕ್ಕಿಯನ್ನು ಕೆಜಿಗೆ ಕೇವಲ 25 ರೂ.ಗೆ ನೀಡಲು ಯೋಜಿಸುತ್ತಿದೆ. ಈ ವಿಷಯವನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.

ಭಾರತ್ ಅಕ್ಕಿಯು ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED), ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಮತ್ತು ಕೇಂದ್ರೀಯ ಭಂಡಾರ್ ಔಟ್‌ಲೆಟ್‌ಗಳ ಮೂಲಕ ಲಭ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ಈಗಾಗಲೇ ಭಾರತ್ ಅಟ್ಟಾ (ಗೋಧಿಹಿಟ್ಟು) ಮತ್ತು ಭಾರತ್ ದಾಲ್ (ಬೇಳೆ) ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಸರ್ಕಾರವು ಅಕ್ಕಿ ವಿಭಾಗಕ್ಕೆ ಪ್ರವೇಶಿಸಿದೆ.

ಬಾಸುಮತಿಯೇತರ ಅಕ್ಕಿಯ ಬೆಲೆ ನಿಯಂತ್ರಣಕ್ಕೆ ಕ್ರಮಗಳು : ದೇಶೀಯ ಮಾರುಕಟ್ಟೆಯಲ್ಲಿ ಬಾಸ್ಮತಿಯೇತರ ಅಕ್ಕಿಯ ಬೆಲೆಗಳು ಕ್ಷಿಪ್ರವಾಗಿ ಏರಿಕೆಯಾಗುತ್ತಿರುವುದು ಸರ್ಕಾರವನ್ನು ಚಿಂತೆಗೀಡು ಮಾಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ‘ಸಂಜೀವ್ ಚೋಪ್ರಾ’ ಇತ್ತೀಚೆಗೆ ಪ್ರಮುಖ ಅಕ್ಕಿ ಸಂಸ್ಕರಣಾ ಉದ್ಯಮ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು.

ಈ ಸಭೆಯಲ್ಲಿ, ಸಂಜೀವ್ ಚೋಪ್ರಾ ಅವರು ಬಾಸ್ಮತಿ ಅಲ್ಲದ ಅಕ್ಕಿಯ ಬೆಲೆಗಳು ಕೈಗೆಟುಕುವ ಬೆಲೆಯಲ್ಲಿ (Reasonable) ದೊರೆಯುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ದೇಶದಲ್ಲಿ ಗುಣಮಟ್ಟದ ಅಕ್ಕಿಯನ್ನು ಪ್ರೊಸೆಸರ್‌ಗಳಿಗೆ 29 ರೂ.ಗೆ ನೀಡಲಾಗುತ್ತಿದೆ. ಆದರೆ ಅದೇ ಅಕ್ಕಿಯನ್ನು ಮಾರುಕಟ್ಟೆಯಲ್ಲಿ ರೂ.43ರಿಂದ ರೂ.50ಕ್ಕೆ ಮಾರಾಟ ಮಾಡುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *