ಕರ್ಪೂರಿ ಠಾಕೂರ್ ಗೆ ಭಾರತ ರತ್ನ ಪ್ರಶಸ್ತಿ : ಚಿತ್ರದುರ್ಗದಲ್ಲಿ ಸವಿತಾ ಸಮುದಾಯ ಹರ್ಷ

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,ಜ.24 :  ಭಾರತ ಸರ್ಕಾರ ಸವಿತಾ ಸಮಾಜದ ಹಿರಿಯರ ಮುಖಂಡರಾದ ಕರ್ಪೂರಿ ಠಾಕೂರರವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಸ್ವಾಗತಿಸಿರುವ ಸವಿತಾ ಸಮಾಜ ಒಬ್ಬ ಹಿಂದುಳಿದ ಸಮಾಜವನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿರುವುದು ಶ್ಲಾಘನೀಯ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರಾದ ಎನ್.ಡಿ.ಕುಮಾರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ಪೂರಿ ಠಾಕೂರ್ ರವರು ಶಾಸಕರಾಗಿ ಉತ್ತಮವಾದ ಕೆಲಸವನ್ನು ಮಾಡುವುದರ ಮೂಲಕ ಬಿಹಾರ್‌ದ ರಾಜ್ಯದ ಮುಖ್ಯಮಂತ್ರಿಗಳಾಗಿ ಬಡವರ ಪರವಾಗಿ ವಿವಿಧ ರೀತಿಯ ಯೋಜನಯನ್ನು ಜಾರಿ ಮಾಡುವುದರ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದರು. ಉಳುವವನೇ ಭೂಮಿ ಒಡೆಯ ಕಾನೂನು ಜಾರಿಯಾದಾಗ ಅದನ್ನು ತಮ್ಮ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡುವುದರ ಮೂಲಕ ಬಡ ಜನರಿಗೆ ಜೀವನವನ್ನು ತೋರಿಸಿದ್ದಾರೆ ಎಂದರು.

ತಮ್ಮ ಅಧಿಕಾರ ಅವಧಿಯಲ್ಲಿ ಮೀಸಲಾತಿಯನ್ನು ಜಾರಿ ಮಾಡುವುದರ ಮೂಲಕ ಹಿಂದುಳಿದ ವರ್ಗದವರಿಗೆ ಮನ್ನಣೆಯನ್ನು ನೀಡಿದರು. ಸವಿತಾ ಸಮಾಜದವರು ಈಗ ಓಬಿಸಿಯಲ್ಲಿದ್ದು ನಮ್ಮನ್ನು ಪರಿಶಿಷ್ಟ ಜಾತಿ ಮೀಸಲಾತಿಗೆ ಸೇರಿಸಬೇಕು, ಜ.28 ರಂದು ಚಿತ್ರದುರ್ಗದಲ್ಲಿ ನಡೆಯುವ ಹಿಂದುಳಿದ ವರ್ಗದವರ ಸಮಾವೇಶದಲ್ಲಿ ಬುದ, ಬಸ, ಅಂಬೇಡ್ಕರ್ ಭಾವಚಿತ್ರ ಹಾಕಿದಂತೆ ನಮ್ಮ ಸಮಾಜದ ಹಿರಿಯರಾದ ಕರ್ಪೂರಿ ಠಾಕೂರವರವರ ಬಾವಚಿತ್ರವನ್ನು ಸಹಾ ಹಾಕುವಂತೆ ಮುಖಂಡರನ್ನು ಆಗ್ರಹಿಸಿದರು.

ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ನಗರಸಭಾ ಸದಸ್ಯರಾದ ಚಂದ್ರಶೇಖರ್ ಮಾತನಾಡಿ, ನಮ್ಮ ಸಮಾಜದವರಿಗೆ ಮರಣೋತ್ತರವಾಗಿ ಭಾರತ ಸರ್ಕಾರ ಭಾರತ ರತ್ನವನ್ನು ನೀಡಿರುವುದು ಸ್ವಾಗತಾರ್ಹವಾಗಿದೆ, ಸರ್ಕಾರ ಮುಂದಿನ ದಿನದಲ್ಲಿ ಕರ್ಪೂರಿ ಠಾಕೂರ ರವರ ಜನ್ಮ ದಿನವನ್ನು ಆಚರಣೆ ಮಾಡಬೇಕು, ಇದು ನಮ್ಮ ಸಮಾಜಕ್ಕೆ ನೀಡುವ ಗೌರವಾಗಿದೆ. ಇದರೊಂದಿಗೆ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಕಾರ್ಯವನ್ನು ಸಹಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಕಾರ್ಯಾಧ್ಯಕ್ಷರಾದ ಲಿಂಗರಾಜು, ಉಪಾಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಆರ್. ಶ್ರೀನಿವಾಸ್, ಘನಶಾಮ್, ಸಾಯಿನಾಥ್,  ನೀಲಕಂಠ ಬಾಬು, ಪ್ರಸನ್ನ, ಸಂತೋಷ, ಅನಿಲ್, ರಂಜಿತ್,  ಮಾರಣ್ಣ, ವೇಣುಗೋಪಾಲ್, ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *