ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದು ಸೋಮವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ.
ಅವರು ಭಾನುವಾರ ಶ್ರೀನಗರದ ಲಾಲ್‌ಚೌಕ್ ಕ್ಲಾಕ್ ಟವರ್ ಬಳಿ ಬಿಗಿ ಭದ್ರತೆಯ ನಡುವೆ ರಾಷ್ಟ್ರಧ್ವಜಾರೋಹಣ ಮಾಡಿದರು. ದೇಶದ
ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 1948 ರಲ್ಲಿ ಇಲ್ಲಿಯೇ ರಾಷ್ಟ್ರಧ್ವಜಾರೋಹಣ ಮಾಡಿದ್ದರು ಎಂಬುದು ಗಮನಾರ್ಹ. ದೇಶದ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ ಎಂದು ರಾಹುಲ್ ಹೇಳಿದರು.
ಸೆಪ್ಟೆಂಬರ್ 7 ರಂದು ಆರಂಭವಾದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು 12 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳು ಮತ್ತು 75 ಜಿಲ್ಲೆಗಳಲ್ಲಿ 4,000 ಕಿಲೋಮೀಟರ್‌ಗಳನ್ನು ಕ್ರಮಿಸಿದೆ. ಧಾರ್ಮಿಕ ಸೌಹಾರ್ದತೆಯೇ ಮುಖ್ಯ ಅಜೆಂಡಾವಾಗಿದ್ದ ಈ ಯಾತ್ರೆಯ ಯಶಸ್ಸಿನಿಂದ ರಾಹುಲ್ ಸಂತಸಗೊಂಡಿದ್ದಾರೆ. ಸೋಮವಾರ ರ‌್ಯಾಲಿಯೊಂದಿಗೆ ಭಾರತ್ ಜೋಡೋ ಯಾತ್ರೆ ಮುಕ್ತಾಯವಾಗಲಿದೆ.
ಪ್ರತಿಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧದ ಹೋರಾಟದಲ್ಲಿ ಒಂದಾಗುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಜೋಡೋ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಜೋಡೋ ಯಾತ್ರೆ ದಕ್ಷಿಣದಿಂದ ಉತ್ತರ ಭಾರತಕ್ಕೆ ತಲುಪಿರುವುದರಿಂದ ಅದರ ಫಲ ದೇಶದೆಲ್ಲೆಡೆ ಇದೆ ಎಂದರು.
ದೇಶಕ್ಕೆ ಬಿಜೆಪಿ-ಆರ್‌ಎಸ್‌ಎಸ್ ದ್ವೇಷ ಮತ್ತು ದುರಹಂಕಾರಕ್ಕೆ ಪರ್ಯಾಯವಾಗಿ ಈ ಯಾತ್ರೆ ತೋರಿಸಿದೆ ಎಂದು ಹೇಳಿದರು.