Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫೆಬ್ರವರಿಯಲ್ಲಿ ಈ ದಿನ ಭಾರತ್‌ ಬಂದ್‌!

---Advertisement---

ಫೆಬ್ರವರಿ 12, 2026 ರಂದು ದೇಶಾದ್ಯಂತ ಬಂದ್‌ಗೆ ಕರೆ ಕೊಡಲಾಗಿದೆ. ಇದೀಗ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಬೆಂಬಲದೊಂದಿಗೆ 2026ರ ಫೆಬ್ರವರಿ 12ರಂದು ‘ಭಾರತ್‌ ಬಂದ್‌’ಗೆ (Bharat Bandh) ಕರೆ ನೀಡಲಾಗಿದೆ.ಈ ಹಿನ್ನೆಲೆ ಭಾರತದ ಹಲವು ಕಡೆ ವ್ಯಾಪಾರ-ವಹಿವಾಟಿನಲ್ಲಿ, ಸಂಚಾರದಲ್ಲಿ ಅಡಚಣೆಯಾಗುವ ಸಾಧ್ಯತೆ ಇದೆ.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಿಂದ ರೈತರು ಆಕ್ರೋಶಗೊಂಡಿದ್ದು, ಈ ಹಿನ್ನೆಲೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಸಿಐಟಿಯು, ಎಐಟಿಯುಸಿ, ಇಂಟಿಯುಸಿ, ಎಚ್‌ಎಂಎಸ್ ಸೇರಿದಂತೆ 10 ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಬಂದ್‌ಗೆ ಕರೆ ನೀಡಿದೆ. ಕಳೆದ ವರ್ಷ ಜಾರಿಗೆ ಬಂದ ನಾಲ್ಕು ಹೊಸ ಕಾರ್ಮಿಕ ಸಂಹಿತೆಯನ್ನು ವಿರೋಧಿಸಿ ಈ ಬಂದ್‌ ಮಾಡಲಾಗುತ್ತಿದೆ. ಈ ಬಂದ್‌ ದೇಶದ ಹಲವಾರು ರಾಜ್ಯಗಳ ಮೇಲೆ ಪರಿಣಾಮ ಬೀಡಲಿದ್ದು, ಬ್ಯಾಂಕಿಂಗ್, ಸಾರಿಗೆ, ಸಾರ್ವಜನಿಕ ವಲಯದ ವ್ಯವಹಾರಗಳಲ್ಲಿ ಅಡ್ಡಿಯಾಗುವ ಸಾಧ್ಯತೆ ಇದೆ.

ಹಳೆಯ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ, 2025ರ ನವೆಂಬರ್‌ನಲ್ಲಿ 4 ಕಾರ್ಮಿಕ ನೀತಿ ಸಂಹಿತೆಯನ್ನು  ಜಾರಿಗೆ ತರಲಾಗಿತ್ತು. ಈ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿದೆ. ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರಾಜೀನಾಮೆಗೆ ಎಸ್‌ಕೆಎಂ ಒತ್ತಾಯಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now