ಚಿತ್ರದುರ್ಗ‌ | ಭರಮಸಾಗರ ಕೊಲೆ ಪ್ರಕರಣ : 24 ಗಂಟೆಯೊಳಗೆ ಆರೋಪಿಗಳ ಬಂಧನ

1 Min Read

ಚಿತ್ರದುರ್ಗ, (ಮೇ.29): ತಾಲೂಕಿನ ಭರಮಸಾಗರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 24 ಗಂಟೆಯೊಳಗೆ ಮೂವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಗಳನ್ನು ಫರ್ವೀನ್(33) ಕಾತ್ರಾಳ್ ತಿಮ್ಮಪ್ಪನಹಳ್ಳಿ ಗ್ರಾಮ, ದಾದಾಫೀರ್(36) ದುರ್ಗಾಂಬಿಕಾ ಬಡಾವಣೆ, ಭರಮಸಾಗರ ಗ್ರಾಮ ಮತ್ತು ಅಮೀರ್(28) ಎಡ್ಡ್ದೆಹಳ್ಳಿ ರಸ್ತೆ, ತೆಲಗಿ ಗ್ರಾಮ, ಹರಪನಹಳ್ಳಿ
ತಾಲ್ಲೂಕು, ವಿಜಯನಗರ ಜಿಲ್ಲೆ ಎಂದು ಟಗುರುತಿಸಲಾಗಿದೆ.

ಘಟನೆಯ ವಿವರ : ಭರಮಸಾಗರದ ಜಟ್ ಪಟ್ ನಗರ ವಾಸಿಯಾದ ಮಹಮದ್ ಬಾಬು ಮೇ. 27 ರಂದು ಭರಮಸಾಗರ ಪೊಲೀಸ್ ಠಾಣೆಯಲ್ಲಿ ನನ್ನ ಅಣ್ಣನಾದ ಭಾಷಾಸಾಬ್ ನ ಹೆಂಡತಿಯಾದ ಫರ್ವಿನ್ ಬಾನು ಹಾಗೂ ಭರಮಸಾಗರ ಗ್ರಾಮದ ದಾದಾಪೀರ್ (ಹನ್ನೆಬಾಯಿ) ಇವರಿಬ್ಬರು ಅಕ್ರಮ ಸಂಬಂದ ಹೊಂದಿದ್ದು, ಈ ವಿಚಾರದಲ್ಲಿ ಅವರಿಬ್ಬರು ನನ್ನ ಅಣ್ಣ ಭಾಷಾಸಾಬ್ ಕೊಲೆ ಮಾಡಿದ್ದಾರೆ.  ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಭರಮಸಾಗರ ಪೊಲೀಸರು ಪ್ರಕರಣ ದಾಖಲಿಸಿ 24 ಗಂಟೆಯೊಳಗೆ ಆರೋಪಗಳನ್ನು ಬಂಧಸಿದ್ದಾರೆ.

ಈ ಪ್ರಕರಣದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪರಶುರಾಮ್.ಕೆ ಪೊಲೀಸ್ ಅಧೀಕ್ಷಕರವರು ಶ್ಲಾಘಿಸಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *