ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ವತಿಯಿಂದ ಭಕ್ತಕನಕದಾಸರ ಜಯಂತಿ ಆಚರಣೆ

suddionenews
1 Min Read

 

ವರದಿ ಮತ್ತು ಫೋಟೋ  ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ವತಿಯಿಂದ ರೋಟರಿ ಬಾಲಭವನದಲ್ಲಿ ಶುಕ್ರವಾರ ನಡೆದ ವಾರದ ಸಭೆಯಲ್ಲಿ ಸಂತ ಶ್ರೇಷ್ಠ ಭಕ್ತಕನಕದಾಸರ ಜಯಂತಿ ಆಚರಿಸಲಾಯಿತು.

ಲಕ್ಷ್ಮಿಕಾಂತ್ ಉಪನ್ಯಾಸ ನೀಡುತ್ತ 15-16 ನೇ ಶತಮಾನದಲ್ಲಿ ಜಾತಿ ಅಸಮಾನತೆ ವಿರುದ್ದ ಹೋರಾಡಿದ ಭಕ್ತ ಕನಕದಾಸ ಕೀರ್ತನೆಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದರು. ಅಂತಹ ಮಹಾನ್ ದಾರ್ಶನಿಕರ ಆಚಾರ, ವಿಚಾರ, ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕನಕದಾಸರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಹೇಳಿದರು.

ರೋಟರಿ ಕ್ಲಬ್ ಚಿನ್ಮುಲಾದ್ರಿ ಚಿತ್ರದುರ್ಗ ಅಧ್ಯಕ್ಷ ರೊ.ಈ.ಅರುಣ್‍ಕುಮಾರ್ ಮಾತನಾಡಿ ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಬಲ್ಲಿರಾ ಎನ್ನುವ ಕೀರ್ತನೆಯ ಮೂಲಕ ಜಾತಿ ಪದ್ದತಿ ವಿರುದ್ದ ಹದಿನೈದನೇ ಶತಮಾನದಲ್ಲಿಯೇ ಜನತೆಯಲ್ಲಿ ಜಾಗೃತಿಯನ್ನುಂಟು ಮಾಡಿದ ಕನಕದಾಸ ಮಹಾನ್ ಸಂತ ಎಂದು ಗುಣಗಾನ ಮಾಡಿದರು.

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತ್ರಿ ಪುರಸ್ಕøತರಾದ ಶ್ರೀಮತಿ ಮೀನಾಕ್ಷಿಭಟ್‍ರವರನ್ನು ಸನ್ಮಾನಿಸಲಾಯಿತು. ಸುಗಮ ಸಂಗೀತ ಹಾಗೂ ಕನ್ನಡ ಗೀತೆಗಳನ್ನು ಹಾಡಲಾಯಿತು.

ವೀರವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ಒನಕೆ ಓಬವ್ವಳ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ರೋಟರಿ ಕ್ಲಬ್ ಚಿನ್ಮುಲಾದ್ರಿ ಚಿತ್ರದುರ್ಗ ಕಾರ್ಯದರ್ಶಿ ರೊ.ಶ್ರೀನಿವಾಸ್ ಮಳಲಿ, ಜಂಟಿ ಕಾರ್ಯದರ್ಶಿ ಶಂಕರಪ್ಪ, ಅಸಿಸ್ಟೆಂಟ್ ಗೌರ್ವನರ್ ಗಾಯತ್ರಿ ಶಿವರಾಂ, ಗುರುಮೂರ್ತಿ, ವೀಣಜೈರಾಂ, ನಿರ್ಮಲ ಭಾರಧ್ವಾಜ್ ಇನ್ನು ಮೊದಲಾದವರು ಕನಕದಾಸರ ಜಯಂತಿಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *