ಭರ್ಜರಿ ಓಪೆನಿಂಗ್ ಪಡೆದ ಭೈರತಿ ರಣಗಲ್ : ರೆಸ್ಪಾನ್ಸ್ ಕಂಡು ಗೀತಾ ಶಿವರಾಜ್‍ಕುಮಾರ್ ಹೇಳಿದ್ದೇನು..?

1 Min Read

 

ಬೆಂಗಳೂರು, ನವೆಂಬರ್. 15 : ಇಂದು ರಾಜ್ಯಾದ್ಯಂತ ಭೈರತಿ ರಣಗಲ್ ಸಿನಿಮಾ ಅದ್ದೂರಿಯಾಗಿ ತೆರೆ ಕಂಡಿದೆ. ಶಿವರಾಜ್‍ಕುಮಾರ್ ನಟನೆಯ ಸಿನಿಮಾಗೆ ಮೊದಲ ಶೋನಲ್ಲಿಯೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರ್ ಗೆ ಜನ ಸಾಗರವೇ ಹರಿದು ಬಂದಿದೆ. ಮಫ್ತಿ ಸಿನಿಮಾದ ಫ್ಲೇವರ್ ಜನರ ಮನಸ್ಸಲ್ಲಿ ಹಾಗೆಯೇ ಉಳಿದಿದ್ದ ಕಾರಣ, ನರ್ತನ್ ಮತ್ತೊಮ್ಮೆ ಗೆಲುವು ಕಂಡಿದ್ದಾರೆ. ಜನರ ನಿರೀಕ್ಷೆಗೆ ಭೈರತಿ ರಣಗಲ್ ದುಪ್ಪಟ್ಟಾಗಿ ರಂಜಿಸಿದ್ದು, ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ.

ಥಿಯೇಟರ್ ಮುಂದೆ ಅಭಿಮಾನಿಗಳ ದಂಡೇ ಬಂದಿತ್ತು. ಪಟಾಕಿ ಸಿಡಿಸಿ, ಶಿವಣ್ಣನ ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ, ಕುಣಿದು ಕುಪ್ಪಳಿಸಿ ಸ್ವಾಗತಿಸಿದರು‌. ಶಿವಣ್ಣನ ಅಭಿನಯದ ಬಗ್ಗೆ ಮಾತಾಡುವಂತೆಯೇ ಇಲ್ಲ. ಅದು ಮತ್ತೆ ಪ್ರೂವ್ ಆಗಿದ್ದು, ಚಿತ್ರಕಥೆ ಹಾಗೇ ಶಿವಣ್ಣನ ನಟನೆಗೆ ಉಘೇ ಉಘೇ ಎಂದಿದ್ದಾರೆ. ಅಭಿಮಾನಿಗಳು ಕಾದಿದ್ದಕ್ಕೂ ಸಾರ್ಥಕವಾಯ್ತು ಎಂಬ ಭಾವವನ್ನು ವ್ಯಕ್ತಪಡಿಸಿದ್ದಾರೆ.

ಭೈರತಿ ರಣಗಲ್ ಶೋ ನೋಡಲು ಬಂದ ಗೀತಾ ಶಿವರಾಜ್‍ಕುಮಾರ್ ಜನರ ರೆಸ್ಪಾನ್ಸ್ ನೋಡಿ ಫುಲ್ ಖುಷಿಯಾಗಿದ್ದಾರೆ. ಗೀತಾ ಶಿವರಾಜ್‍ಕುಮಾರ್ ಅವರು ಕುಇಡ ಅಭಿಮಾನಿಗಳಂತೆ ಅಷ್ಟೇ ಕುತೂಹಲದಿಂದ ಮೊದಲ ಶೋ ನೋಡಿದ್ದಾರೆ. ಈ ಸಿನಿಮಾ ಬಗ್ಗೆ ಮೊದಲಿನಿಂದಾನು ಟಾಕ್ ಇತ್ತು. ಈಗಷ್ಟೇ ನಮ್ಮ ಪ್ರೊಡಕ್ಷನ್ ನಲ್ಲಿ ಸಿನಿಮಾಗಳನ್ನು ಶುರು ಮಾಡಿದ್ದೀವಿ. ಇದು ಎರಡನೇ ಸಿನಿಮಾ. ಈ ರೆಸ್ಪಾನ್ಸ್ ನೋಡಿ ಖುಷಿ ಆಯ್ತು. ಎಲ್ಲಾ ಕ್ರೆಡಿಟ್ ನರ್ತನ್ ಗೆ ಹೋಗಬೇಕು. ಅವರಿಗೆ ನಟನೆ ಅನ್ನೋದು ಅವರ ರಕ್ತದಲ್ಲಿಯೇ ಹರಿದು ಬಂದಿದೆ. ಅವರು ಯಾವುದೇ ಸಿನಿಮಾ ಮಾಡಿದರು ಆನಂದ್ ಸಿನಿಮಾದಂತೆ ಫೀಲ್ ಮಾಡ್ತಾರೆ, ಟೆನ್ಶನ್ ಮಾಡಿಕೊಳ್ಳುತ್ತಾರೆ. ನಾನು ಎಷ್ಟೋ ಸಲ ಸಮಾಧಾನ ಮಾಡಿದ್ದೀನಿ. ಇವತ್ತು ಇದನ್ನು ಕೇಳಿ ಖುಷಿಯಾಗಿದ್ದಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *