ಬೆಂಗಳೂರು: ಹೊಸದಾಗಿ ಪಠ್ಯ ಪುಸ್ತಕ ಪರಿಷ್ಕರಣೆಯಾದಾಗಿನಿಂದಲೂ ಹಲವು ವಿರೋಧಗಳು ವ್ಯಕ್ತವಾಗುತ್ತಿದೆ. ಪಠ್ಯಪುಸ್ತಕದಲ್ಲಿನ ಸಾಲುಗಳಿಗೆ ವಿರೋಧ ಕೇಳಿ ಬಂದಿತ್ತು. ಎಷ್ಟೇ ವಿರೋಧ ಕೇಳಿ ಬಂದರು ಇಲಾಖೆ ಮಾತ್ರ ಡೋಂಟ್ ಕೇರ್ ಎನ್ನುತ್ತಾ ಅದೇ ಪಠ್ಯವನ್ನು ಫೈನಲ್ ಮಾಡಿ ಎಲ್ಲಾ ಕಡೆ ಕಳುಹಿಸಿತ್ತು. ವಿರೋಧ ತಣ್ಣಗಾದ ಬೆನ್ನಲ್ಲೇ ಶಿಕ್ಷಣ ಇಲಾಖೆ, ಇದೀಗ ಭಗತ್ ಸಿಂಗ್ ಪಠ್ಯಪುಸ್ತಕವನ್ನು ಕೈ ಬಿಟ್ಟಿದೆ.
ಪಠ್ಯ ಪರಿಷ್ಕರಣೆ ವೇಳೆಯೇ ಭಗತ್ ಸಿಂಗ್ ಪಠ್ಯವನ್ನು ಶಿಕ್ಷಣ ಇಲಾಖೆ ಕೈಬಿಟ್ಟುತ್ತು. ಬಳಿಕ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ ಪಠ್ಯ ತೆಗೆದಿಲ್ಲ ಮುಂದುವರೆಯುತ್ತೆ ಎಂಬ ನಾಟಕವಾಡಿತ್ತು. ಇದೀಗ ಎಸ್ಎಸ್ಎಲ್ಸಿ ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್ ಪಾಠವನ್ನು ಬೋಧನೆಯಿಂದ ಕೈ ಬಿಟ್ಟಿದೆ. ಮಕ್ಕಳಿಗೆ ಭಗತ್ ಸಿಂಗ್ ಪಾಠ ಮಾಡದಂತೆ ಸುತ್ತೋಲೆ ಹೊರಡಿಸಿದೆ.
ಭಗತ್ ಸಿಂಗ್ ಪಾಠದ ಲೇಖಕ ಹಾಗೂ ಶಿಕ್ಷಣ ತಜ್ಞ ಜಿ ರಾಮಕೃಷ್ಣ ಅವರು, ಶಿಕ್ಷಣ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ವಿರೋಧ ಮಾಡಿರೋದು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಬಗ್ಗೆ. ನಾನು ಈಗಲೂ ಆ ಸಮಿತಿಯನ್ನ ವಿರೋಧ ಮಾಡ್ತೀನಿ ಆದ್ರೆ ಶಿಕ್ಷ ಣ ಸಚಿವರು ಕಾನೂನಿಡಿ ಬದ್ಧವಲ್ಲದ ಸಮಿತಿ ವಿರುದ್ಧ ನಿಲ್ಲದೇ ನನ್ನ ಭಗತ್ ಸಿಂಗ್ ಪಾಠ ಕೈಬಿಟ್ಟಿದ್ದಾರೆ.. ನಾನು ಯಾವುದೇ ಪ್ರೋತ್ಸಾಹಧನಕ್ಕೆ ಗೆ ಭಗತ್ ಸಿಂಗ್ ಪಾಠದ ಹಕ್ಕು ಕೊಟ್ಟವನಲ್ಲ ಪಾಠ ಕೈಬಿಟ್ಟದ್ದಾರೆ ಅಂದ್ರೆ ಶಿಕ್ಷಣ ಸಚಿವರ ನಡೆ ಯಾವ ಕಡೆ ಅಂತಾ ಸ್ಪಷ್ಟವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ನಡೆ ವಿರುದ್ಧ ಗರಂ ಆಗಿದ್ದಾರೆ