ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 23 : ಚಿತ್ರದುರ್ಗದ ನ್ಯಾಷನಲ್ ಆಂಗ್ಲ ಶಾಲೆಗೆ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಬೆಂಗಳೂರು ಇವರಿಂದ ಕೊಡಮಾಡುವ ಅತ್ಯುತ್ತಮ ಶ್ರೇಷ್ಠ ಶಾಲಾ ಆಡಳಿತ ಮತ್ತು ನಿರಂತರ ಸುಧಾರಣೆ ಪ್ರಶಸ್ತಿಯನ್ನು ನೀಡಲಾಯಿತು.
ಬೆಂಗಳೂರಿನ ಅರಮನೆ ರಸ್ತೆಯ ಬಳಿ ಇರುವ ಭಾರತೀಯ ಸ್ಕೌಟ್ಸ್ – ಗೈಡ್ಸ್ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಬೆಂಗಳೂರು ಇವರಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುದಾನ ರಹಿತ ಶಾಲೆಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಅತ್ಯುತ್ತಮ ಶ್ರೇಷ್ಠ ಶಾಲಾ ಆಡಳಿತ ಪ್ರಶಸ್ತಿಯನ್ನು ನೀಡಿದೆ.
ಕುಸುಮ- ಮಂಡಳಿಯು ರಾಜ್ಯಾದ್ಯಂತ ಸುಮಾರು 2500 ಶಾಲೆಗಳ ಸದಸ್ಯತ್ವವನ್ನು ಹೊಂದಿದ್ದು 2024-25ನೇ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಕಾರ್ಯಕ್ಷಮತೆಯನ್ನು ಗುರುತಿಸಿ ಅವರ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನ್ಯಾಷನಲ್ ಆಂಗ್ಲ ಶಾಲೆಗೆ ಅತ್ಯುತ್ತಮ ಶ್ರೇಷ್ಠ ಶಾಲಾ ಆಡಳಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾರತೀಯ ಸ್ಕೌಟ್ಸ್ – ಗೈಡ್ಸ್ ರಾಜ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ, ಭಾರತ ಸರ್ವೋಚ್ಛ ನ್ಯಾಯಾಲಯದ ಪೂರ್ವ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ , ಐ.ಪಿ.ಎಸ್ ಅಧಿಕಾರಿಯಾದ ರವಿ ಡಿ ಚನ್ನಣ್ಣನವರು ಮತ್ತು ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ನ್ಯಾಷನಲ್ ಆಂಗ್ಲ ಶಾಲೆಯ ಕಾರ್ಯದರ್ಶಿ ಶ್ರೀಮತಿ ಸಯೀದಾ ನಾಜ್, ಆಡಳಿತಾಧಕಾರಿ ಅಕ್ತರ್ , ಶಾಲೆಯ ನಿರ್ದೇಶಕರಾದ ಸೈಯದ್ ಶುಜಾತ್ ಮತ್ತು ಶಾಲೆಯ ವ್ಯವಸ್ಥಾಪಕರಾದ ಮೊಹಮ್ಮದ್ ಇಮ್ರಾನ್ ಸೈಫ್ ಮತ್ತು ವಿದ್ಯಾ ವಿಕಾಸ ಶಾಲೆಯ ವಿಜಯಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದರು.