ಚಿತ್ರದುರ್ಗ, (ಡಿಸೆಂಬರ್.03) : ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಕಂಬಗಳಿಗೆ ಹಾಗೂ 11 ಕೆ.ವಿ/ಎಲ್.ಟಿ. ಮಾರ್ಗಗಳ ಮೇಲೆ ಡಿಶ್ ಕೇಬಲ್ ಹಾಗೂ ನೆಟ್‍ವರ್ಕ ಕೇಬಲ್‍ಗಳನ್ನು ಎಳೆದುಕೊಂಡು ವಿದ್ಯುತ್ ಕಂಬಗಳಿಗೆ ಅಳವಡಿಸಿರುತ್ತಾರೆ. ಈ ತೊಂದರೆಗಳಿಂದ ಹೆಚ್.ಟಿ, ಎಲ್.ಟಿ ಮಾರ್ಗಗಳು ಶಾರ್ಟ್ ಆಗಿ ಹೆಚ್ಚಿನ ವೋಲ್ಟೇಜ್ ಪ್ರವಹಿಸಿ ಗ್ರಾಹಕರ ಉಪಕರಣಗಳು ಸುಟ್ಟು ಹಾಗೂ ಇನ್ನಿತರೆ ತೊಂದರೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ವಿದ್ಯುತ್ ಕಾಯ್ದೆ (CEA Measures relating to safety and Electric supply 2010 clause 61(3) ಸುರಕ್ಷತೆಯ ದೃಷ್ಠಿಯಿಂದ ವಿದ್ಯುತ್ ಕಂಬಗಳಿಗೆ ಕಟ್ಟಿರುವಂತಹ ಕೇಬಲ್‍ಗಳನ್ನು ತುರ್ತಾಗಿ ಕಳಚಲು ಎಲ್ಲಾ ಕೇಬಲ್ ಮಾಲೀಕರ ಗಮನಕ್ಕೆ ಬೆಸ್ಕಾಂ ಇಲಾಖೆ ತರಬಯಸುತ್ತದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ತಿಮ್ಮಣ್ಣ ತಿಳಿಸಿದ್ದಾರೆ.