ನಾದಬ್ರಹ್ಮ ಹಂಸಲೇಖ ಅವರ ಪರ: ಸತ್ಯ ನುಡಿ ಬಗ್ಗೆ ಬೆಂಬಲಕ್ಕೆ ನಿಂತ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು

2 Min Read

ಬೆಂಗಳೂರು : (ನ.18) :  ನಾದಬ್ರಹ್ಮ ಹಂಸಲೇಖ ವಿರುದ್ಧ ಟ್ರೋಲ್ ಮಾಡುವವರಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಯಿತು.

ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಾಕಷ್ಟು ಟೀಕೆಗೆ ಒಳಗಾಗಿದ್ದ ಹಂಸಲೇಖ ಅವರ ಪರ ಹಾಗೂ ಅವರ ಸತ್ಯದ ನುಡಿಗಳ ಬಗ್ಗೆ ಸದಾಕಾಲವೂ ಡಾ ಹಂಸಲೇಖ ಅವರಿಗೆ ಇರಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದಿಂದ ಇಡೀ ಬೆಂವಿವಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಇದೇ ಸಂದರ್ಭಗಳಲ್ಲಿ ಬೆಂವಿವಿಯಲ್ಲಿನ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಬೆಂಬಲವನ್ನು ನೀಡಿದರು.

ನಂತರ ಮಾತನಾಡಿದ ಬೆಂವಿವಿ ಪ್ರಾಧ್ಯಾಪಕರಾದ ಟಿ.ಎಚ್‌.ಮೂರ್ತಿ ಅವರು ಪ್ರಸ್ತುತ ದಿನಗಳಲ್ಲಿ ಅಸ್ಪೃಶ್ಯತೆ ಇನ್ನೂ ಕೂಡ ಜೀವಂತವಾಗಿರುವುದು, ಮನುವಾದಿ ಮನಸ್ಸುಗಳಿಗೆ
ದಿಕ್ಕಾರವಿರಲಿ. ಹಾಗೆಯೇ ಅಭಿವ್ಯಕ್ತಿ ಸ್ವಾತಂತ್ರ್ಯ ಜತೆ ಜತೆಗೆ ಅಹಾರದ ಹಕ್ಕಿನ ಮೇಲಾಗುತ್ತಿರುವ ನಿರಂತರ ದಾಳಿ ಮತ್ತುದಬ್ಬಾಳಿಕೆ, ದ್ವೇಷದ, ಅಸೂಯೆ ಇನ್ನೂ ಮುಖ್ಯವಾಗಿ ಬೂಟಾಟಿಕೆಯ ಸಾಂಕೇತಿಕ ಒಳಗೊಳ್ಳುವಿಕೆಯ ಆಪತ್ತುಗಳ ಹಾಗೂ ಬಹುಸಂಸ್ಕೃತಿಯನ್ನ ಹತ್ತಿಕ್ಕಿ ಏಕಮುಖ ವಾದಂತಹ ಆಚಾರ-ವಿಚಾರಗಳನ್ನ
ಹೇಳಲ್ಪಟ್ಟಿದೆ.

ಅದೇ ರೀತಿಯಲ್ಲಿ ಆಳುವ ಅವಿವೇಕಿಗಳ ವಿರುದ್ಧವಾಗಿ ಚಾಟಿ ಬೀಸಿ ಸಾಮರಸ್ಯ ಸಮಸಮಾಜದ ಆಶಯಗಳನ್ನ ಬುಡಮೇಲು ಮಾಡಲು ಅವಣಿಸುತ್ತಿರುವ ಒಂದಿಷ್ಟು ಷಡ್ಯಂತ್ರಗಳ ಮುಂದಿಟ್ಟು ಕೊಂಡು ಡೆಮಾಕ್ರಸಿಯನ್ನು ಧರ್ಮಕ್ರಸಿಯಾಗಿ ಬದಲಾಯಿಸಲು ದುರದೃಷ್ಟಕರ ಸಂಗತಿಯಾಗಿದೆ.

ಇನ್ನೊಂದು ವಿಚಾರವೆಂದರೆ ಸಮಾಜದ ಭಾಗವಾಗಿರುವ ರಾಜಕೀಯ – ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲ ವ್ಯಕ್ತಿಗಳ ನಾಟಕೀಯವಾಗಿ ಬೆಳವಣಿಗೆಯನ್ನು ಬಲವಾಗಿ ಖಂಡಿಸಿದ ಪರಿಣಾಮವಾಗಿ ಇಂದು ಎಲ್ಲಾ ಬೆಂವಿವಿಯಲ್ಲಿನ ಸೇರಿಕೊಂಡು ಡಾ ಹಂಸಲೇಖ ಅವರ ಮಾತುಗಳಿಗೆ ಮತ್ತು ಸತ್ಯದ ನುಡಿಯ ಬಗ್ಗೆ ಸದಾಕಾಲವೂ ಅಗತ್ಯವಾದ ಬೆಂಬಲ ಇರಲಿದೆ.  ಇದೇ ಸಂದರ್ಭದಲ್ಲಿ ಡಿಎಸ್ ಎಸ್ ನ ರಾಜ್ಯ ಪ್ರದಾನ ಸಂಚಾಲಕರಾದ ಮಾವಳ್ಳಿ ಶಂಕರ್ ಅವರು ಮಾತನಾಡಿದರು.

ನಂತರ ಬೆಂವಿವಿಯಲ್ಲಿನ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟದಿಂದ ಎಲ್ಲಾ ಸದಸ್ಯರು ಬಲವಾಗಿ ಸತ್ಯದ ನುಡಿಗಳ ಬಗ್ಗೆ ಬೆಂಬಲವನ್ನು ಸೂಚಿಸುವ ಮೂಲಕ ಈ ಪ್ರತಿಭಟನೆಯನ್ನು ಬಹಳ ಯಶಸ್ವಿಯಾಗಿ ನಡೆಯಿತು.

ಇದೇ ಸಂದರ್ಭದಲ್ಲಿ ಪಾಲ್ಗೊಂಡಿದ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೊತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಎಲ್ಲಾ ವಿದ್ಯಾರ್ಥಿಗಳು ಮತ್ತು ಬೆಂವಿವಿಯ ಅಧ್ಯಾಪಕ ವೃಂದ ಬಳಗದವರು ಜತೆಯಲ್ಲಿ ಇದ್ದು,ಈ ಹೋರಾಟದಿಂದ ಎಚ್ಚರಿಕೆ ನೀಡುವುದು.

ಬೆಂವಿವಿಯ ಉಪಕುಲಪತಿಗಳಾದ ಕೆ.ಆರ್. ವೇಣುಗೋಪಾಲರ ಮೂಲಕ ಮುಖಾಂತರ ಮನವಿ ಪತ್ರವನ್ನು ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಹಂಸಲೇಖ ಅವರಿಗೆ ಸೂಕ್ತ ಭದ್ರತೆ ಒದಗಿಸಲು ಇದೇ ಸಂದರ್ಭದಲ್ಲಿ ಮನವಿ ಮಾಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *