ಬೆಂಗಳೂರು: ಚಳಿಗಾಲದಲ್ಲೂ ಮಳೆಯಾಗುತ್ತಿದ್ದು, ಹಿಮದಲ್ಲಿ ಕುಳಿತಂತ ಫೀಲ್ ಕೊಡುತ್ತಿದೆ ಇವತ್ತಿನ ವಾತಾವರಣ. ಬೆಳಗ್ಗೆಯಿಂದ ಒಂದೇ ಸಮನೆ ತುಂತುರು ಮಳೆ ಸುರಿಯುತ್ತಿದ್ದು, ಹೊರಗೆ ಹೋಗುವುದಕ್ಕೆ ಜನ ಕಷ್ಟಪಡುತ್ತಿದ್ದಾರೆ. ಮೈ ಚಳಿ ಕೊಡವಿ ಏಳಲು ಮನಸ್ಸಿಲ್ಲದೆ ಹೊದ್ದು ಮಲಗುತ್ತಿದ್ದಾರೆ.
ಮೌಂಡಸ್ ಚಂಡಮಾರುತದ ಎಫೆಕ್ಟ್ ಸದ್ಯ ರಾಜ್ಯದಲ್ಲೂ ಮಳೆಯನ್ನು ಹೆಚ್ಚಿಸಿದೆ. ಬೆಳೆ ಕೊಯ್ಲು ಸಮಯದಲ್ಲಿ ಹೀಗೆ ಮಳೆ ಹಿಡಿದುಕೊಂಡಿರುವುದು ರೈತರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಆದ್ರೆ ಮುಂದಿನ ನಾಲ್ಕು ದಿನಗಳ ಕಾಲ ಇನ್ನು ಮಳೆ ಹಾಗೆ ಇರಲಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಾಲ್ಕೈದು ದಿನ ಚಳಿಯ ವಾತಾವರಣ ಮುಂದವರೆಯಲಿದೆ.
ಚಂಡಮಾರುತದಿಂದ ಚೆನ್ನೈ, ತಮಿಳುನಾಡಿನಾದ್ಯಂತ ಜೋರು ಮಳೆಯಿದೆ. ಹೀಗಾಗಿ ಅಲ್ಲಿನ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ರಾಜ್ಯದಲ್ಲೂ ಇನ್ನು ಮೂರ್ನಾಲ್ಕು ದಿನ ಹೆಚ್ಚು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.