ಬೆಂಗಳೂರು: ಅಬ್ಬಾ.. ಸಿಗರೇಟ್ ಸೇದಿದ್ರೆ ಇಷ್ಟೆಲ್ಲಾ ಫೈನ್ ಕಟ್ಬೇಕಾ ಅಂತ ಯೋಚ್ನೆ ಮಾಡ್ತಾ ಇದ್ದೀರಾ ಅಲ್ವಾ. ಅದು ಸತ್ಯವೇ. ಈಗಾಗಲೇ ಸರ್ಕಾರವೇ ಸಾಕಷ್ಟು ಸಲ ಹೇಳಿದೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ಸಿಗರೇಟ್ ಸೇದುವುದು ಅಪರಾಧವೆಂದು. ಹೀಗಿದ್ದಾಗಲೂ ಜನ ಕಂಡ ಕಂಡಲ್ಲೆಲ್ಲಾ ಸಿಗರೇಟ್ ಸೇದಿದ್ರೆ ಹೇಗೆ ಅಲ್ವಾ..?.
ಇದೀಗ ಪೊಲೀಸರು ಆ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಎಲ್ಲೆಂದರಲ್ಲಿ ಸಿಗರೇಟ್ ಸೇದಿದ್ರೆ ಮಾತ್ರ ದಂಡ ಗ್ಯಾರಂಟಿ. ಈ ರೀತಿಯ ಕೇಸ್ ನಿಂದಾಗಿ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇವಲ 40 ದಿನದಲ್ಲಿ 2 ಲಕ್ಷ ಫೈನ್ ಹಾಕಲಾಗಿದೆ.
ದೇವಸ್ಥಾನ, ಶಾಲಾ ಕಾಲೇಜು, ಸಾರ್ವಜನಿಕ ಪ್ರದೇಶದಲ್ಲಿ ವೀಕೆಂಡ್ ಗಳಲ್ಲಿ ಹೆಚ್ಚು ಧೂಮಪಾನ ಮಾಡುತ್ತಾರೆ ಅನ್ನೋ ದೂರಿನ ಮೇರೆಗೆ ಪೊಲೀಸರು ಅಲರ್ಟ್ ಆಗಿದ್ದರು. ಈ ಸಂಬಂಧ ಡಿಸಿಪಿ ಶ್ರೀನಾಥ್ ಜೋಷಿ ಅದರ ಬಗ್ಗೆ ಗಮನ ಹರಿಸೋದಕ್ಕೆ ಇನ್ಸ್‌ಪೆಕ್ಟರ್ ರಾಜೇಶ್ ಅವರಿಗೆ ತಿಳಿಸಿದ್ದರು. ಅದನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, 40 ದಿನದಲ್ಲಿ 1 ಸಾವಿರ ಕೇಸ್ ದಾಖಲಾಗಿತ್ತು. ಇದೀಗ ದಂಡ ವಸೂಲಾದ ಮೇಲೆ ಅಲ್ಲಿನ ಯುವಕರು ಸಿಗರೇಟ್ ಹಚ್ಚೋದಕ್ಕೆ ಭಯ ಪಟ್ಟಿದ್ದಾರೆ. ಒಮ್ಮೆ ಸಿಕ್ಕಿಬಿದ್ದರೆ 200 ರೂಪಾಯಿ ದಂಡ ವಸೂಲು ಮಾಡಲಾಗುತ್ತಿದೆ.