ಬೆಂಗಳೂರು-ಗೋವಾ ವಂದೇ ಭಾರತ್ ರೈಲು ಪ್ರಾರಂಭ: ವೇಳಾಪಟ್ಟಿ ಇಲ್ಲಿದೆ

1 Min Read

ಪ್ರವಾಸ ಹೋಗುವ ಜನರಿಗೆ ಭಾರತೀಯ ರೈಲ್ವೆ ಗುಡ್ ನ್ಯೂಸ್ ನೀಡಲಿದೆ.  ಬೆಂಗಳೂರು-ಗೋವಾ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ತಯಾರಿ ನಡೆಸಿದ್ದು, ಕರಡು ವೇಳಾಪಟ್ಟಿಯನ್ನು ಸಹ ತಯಾರು ಮಾಡಲಾಗಿದೆ.ಈ ಮಾರ್ಗದ ಪ್ರಯಾಣ 13 ಗಂಟೆಗಳು ಎಂದು ಅಂದಾಜಿಸಲಾಗಿದೆ.

ಯಶವಂತಪುರ-ಮಡಗಾಂವ್, ಮಡಗಾಂವ್-ಯಶವಂತಪುರ ನಡುವೆ ರೈಲು ಸಂಚಾರವನ್ನು ನಡೆಸಲಿದೆ. ಎರಡೂ ಕಡೆಯಿಂದ ರೈಲು ಮುಂಜಾನೆ ಹೊರಟು ಸಂಜೆ ತಲುಪುವಂತೆ ವೇಳಾಪಟ್ಟಿ ತಯಾರು ಮಾಡಲಾಗುತ್ತಿದೆ. ರೈಲು ಪಡೀಲ್ ಬೈಪಾಸ್ ಮೂಲಕ ಸಂಚಾರ ನಡೆಸುವಂತೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಕರಡು ವೇಳಾಪಟ್ಟಿ ಪ್ರಕಾರ ಯಶವಂತಪುರ-ಮಡಗಾಂವ್ ವಂದೇ ಭಾರತ್ ರೈಲು ಯಶವಂತಪುರದಿಂದ ಬೆಳಗ್ಗೆ 6.05ಕ್ಕೆ ಹೊರಡಲಿದೆ. ಪಡೀಲ್‌ಗೆ 2 ಗಂಟೆ, ಮಡಗಾಂವ್‌ಗೆ ಸಂಜೆ 7 ಗಂಟೆಗೆ ತಲುಪಲಿದೆ.
ಮಡಗಾಂವ್-ಯಶವಂತಪುರ ನಡುವಿನ ರೈಲು ಮಡಗಾಂವ್‌ನಿಂದ ಬೆಳಗ್ಗೆ 5.30ಕ್ಕೆ ಹೊರಡಲಿದೆ. ಪಡೀಲ್‌ಗೆ 11 ಗಂಟೆಗೆ ಆಗಮಿಸಲಿದ್ದು, ಯಶವಂತಪುರಕ್ಕೆ ಸಂಜೆ 6.40ಕ್ಕೆ ತಲುಪಲಿದೆ. ಈ ಮಾರ್ಗದ ರೈಲು ಪ್ರಯಾಣದ ಅವಧಿ 13.10 ಗಂಟೆಗಳು ಎಂದು ಅಂದಾಜಿಸಲಾಗಿದೆ

ಸದ್ಯದ ಮಾಹಿತಿ ಪ್ರಕಾರ ಬೆಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಇಲಾಖೆ ತಯಾರಿ ನಡೆಸಿದೆ. ಈ ಕುರಿತು ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಪರಿಶೀಲನೆ ನಡೆಸುತ್ತಿದ್ದಾರೆ.ಈ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಿದ ಬಳಿಕ ವೇಳಾಪಟ್ಟಿ ಅಂತಿಮಗೊಳಿಸಲು ಇಲಾಖೆ ಮುಂದಾಗಿದೆ.

Share This Article
Enable Notifications OK No thanks