ಬೆಂಗಳೂರು – ಧಾರವಾಡ ವಂದೇ ಭಾರತ್ ಟ್ರೈನ್ ಗೆ ಇಂದು ಪ್ರಧಾನಿ ಚಾಲನೆ : ಯಾವಾಗಿಂದ ಸಂಚರಿಸಬಹುದು ಎಂಬ ಮಾಹಿತಿ ಇಲ್ಲಿದೆ

ನವದೆಹಲಿ: ಬೆಂಗಳೂರಿನಿಂದ ಧಾರವಾಡಕ್ಕೆ ವಂದೇ ಭಾರತ್ ಟ್ರೈನ್ ಅನ್ನು ಇಂದಿನಿಂದ ಬಿಡಲಾಗುತ್ತಿದೆ. ಪ್ರಧಾನಿ ಮೋದಿ ಅವರು ವಂದೇ ಭಾರತ್ ಟ್ರೈನ್ ಗೆ ಭೋಪಾಲ್ ನ ರಾಣಿ ಕಮಲಪಾಟಿ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ. ಈ ಮೂಲಕ ರಾಜ್ಯಕ್ಕೆ ಎರಡನೇ ಐಷರಾಮಿ ರೈಲು ಬಿಡುಗಡೆ ಮಾಡಿದಂತೆ ಆಗುತ್ತದೆ. ಈಗಾಗಲೇ ಬೆಂಗಳೂರು ಟು ಮೈಸೂರು ವಂದೇ ಭಾರತ್ ರೈಲು ಸಂಚಾರ ಮಾಡುತ್ತಿದೆ.

ಇಂದು ಬೆಳಗ್ಗೆ 10.30ಕ್ಕೆ ಟ್ರೈನ್ ಸಂಚಾರಕ್ಕೆ ಚಾಲನೆ ಸಿಗಲಿದೆ. ವಂದೇ ಭಾರತ್ ಟ್ರೈನ್ ಬೆಂಗಳೂರು – ಧಾರವಾಡ, ಗೋವಾ – ಮುಂಬೈ, ಇಂಧೋರ್ – ಭೋಪಾಲ್ ನಡುವೆ ಸಂಚಾರ ನಡೆಸಲಿದೆ. ಪ್ರಧಾನಿ ಮೋದಿ ಅವರು ಇಂದಿನಿಂದ ಚಾಲನೆ ನೀಡಲಿದ್ದಾರೆ.

ಇನ್ನು ಸಾರ್ವಜನಿಕ ಸಂಚಾರಕ್ಕೆ ವಂದೇ ಭಾರತ್ ಬೆಂಗಳೂರು ಟು ಧಾರವಾಡ ನಾಳೆಯಿಂದ ಅವಕಾಶ ಸಿಗಲಿದೆ. ಈ ಟ್ರೈನು ಬೆಂಗಳೂರಿನಿಂದ ಬೆಳಗ್ಗೆ 5.57ಕ್ಕೆ ಹೊರಟೆರೆ ಮಧ್ಯಾಹ್ನ 12.10ಕ್ಕೆ ಧಾರವಾಡಕ್ಕೆ ತಲುಪಲಿದೆ. ಮಧ್ಯಾಹ್ನ 1.15ಕ್ಕೆ ಮತ್ತೆ ಧಾರವಾಡ ಬಿಡಲಿದೆ. ಸಂಜೆ 7 ಗಂಟೆಗೆಲ್ಲಾ ಬೆಂಗಳೂರಿಗೆ ಬಂದು ತಲುಪಲಿದೆ. ದಿನವಿಡೀ ಸಂಚಾರ ಮಾಡಬೇಕಲ್ಲ ಎಂಬುವವರಿಗೆ ವಂದೇ ಭಾರತ್ ತುಂಬಾ ಅನುಕೂಲಕರವಾಗಲಿದೆ. ಆದರೆ ಟಿಕೆಟ್ ಚಾರ್ಜ್ ಕೇಳಿದ್ರೆ ಶಾಕ್ ಆಗ್ಬೇಕು.

AC ಚೇರ್​​ಕಾರ್​ನಲ್ಲಿ ಬೆಂಗಳೂರಿನಿಂದ ಧಾರವಾಡಕ್ಕೆ 1165 ರೂಪಾಯಿ. ಬೆಂಗಳೂರಿನಿಂದ ಧಾರವಾಡ (ಎಕ್ಸಿಕ್ಯೂಟಿವ್ ಕ್ಲಾಸ್​) 2245 ರೂಪಾಯಿ. ಧಾರವಾಡದಿಂದ ಬೆಂಗಳೂರು (AC ಚೇರ್​​ಕಾರ್) 1130 ರೂಪಾಯಿ.ಧಾರವಾಡದಿಂದ ಬೆಂಗಳೂರು (ಎಕ್ಸಿಕ್ಯೂಟಿವ್ ಕ್ಲಾಸ್​) 2240 ರೂಪಾಯಿ ಇರಲಿದೆ.

Leave a Reply

Your email address will not be published. Required fields are marked *

error: Content is protected !!