ಬೆಂಗಳೂರು: ಕೈಗಾರಿಕಾ ಹಬ್ ಗಾಗಿ ಕೆಐಎಡಿಬಿಗೆ BEML ಭೂಮಿ ಹಸ್ತಾಂತರ ವಿಚಾರ, ವಿಧಾನಸಭೆಯಲ್ಲಿ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಾ ಶಶಿಧರ್ ಪ್ರಶ್ನೆ ಎತ್ತಿದ್ದಾರೆ.
ರೂಪಾ ಶಶಿಧರ್ ಪ್ರಶ್ನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉತ್ತರ ನೀಡಿದ್ದು, ಬೆಮೆಲ್ ನ 900 ಎಕರೆ ಭೂಮಿಯನ್ನು ಕೈಗಾರಿಕೆಗೆ ಹಸ್ತಾಂತರ ಮಾಡಲಾಗಿದೆ. ಕೆಐಎಡಿಬಿ ಮೂಲಕ ಅಭಿವೃದ್ಧಿ ಮಾಡುವ ಪ್ರಸ್ತಾವನೆ ಇದೆ. ಬೆಂಗಳೂರು ಸುತ್ತ ಮುತ್ತ ಜಮೀನು ಸಿಗುವುದೇ ಕಷ್ಟವಿದೆ. ಇನ್ನು ಕೆಐಎಡಿಬಿ ಮೂಲಕ ವಶಪಡಿಸಿಕೊಂಡರೆ ಸಾಕಷ್ಟು ದುಬಾರಿಯಾಗುತ್ತದೆ.
ಕೈಗಾರಿಕೆ ಸ್ಥಾಪನೆ ಮಾಡುವವರಿಗೆ ಅದರ ಹೊರೆ ಬೀಳುತ್ತದೆ. ಕೆಜಿಎಫ್ ಬೆಂಗಳೂರಿಗೆ ಹತ್ತಿರವಿದ್ದರು ಅದು ಕೈಗಾರಿಕಾ ವಂಚಿತ ಪ್ರದೇಶವಾಗಿದೆ. ಕೋಲಾರದಲ್ಲಿ ಮೈನ್ಸ್ ನಿಂತ ಮೇಲೆ ಉದ್ಯೋಗಕ್ಕೆ ಕೊರತೆಯಾಗಿದೆ. ಈಗಾಗಲೇ ಈ ವಿಚಾರವನ್ನು ಕೈಗಾರಿಕಾ ಸಚಿವರು, ಶಾಸಕರು ಗಮನಕ್ಕೆ ತಂದಿದ್ದಾರೆ. ಕಂದಾಯ ಇಲಾಖೆಯಿಂದ ಕೈಗಾರಿಕೆಗೆ ಭೂಮಿ ನೀಡಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರಿಸಿದ್ದಾರೆ.