ಬಳ್ಳಾರಿ : ಏಪ್ರಿಲ್ 09 ರಂದು ವಿದ್ಯುತ್ ವ್ಯತ್ಯಯ

suddionenews
1 Min Read

 

ಬಳ್ಳಾರಿ, ಏ.08 : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಯ 220/11ಕೆವಿ ಅಲ್ಲಿಪುರ್ ವಿದ್ಯುತ್ ಫೀಡರ್‌ನಲ್ಲಿ ವಿದ್ಯುತ್ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವುರಿಂದÀ ಏ.09 ರಂದು ಬೆಳಿಗ್ಗೆ 9.30 ಗಂಟೆಯಿಂದ ಬೆಳಿಗ್ಗೆ 11.30 ಗಂಟೆಯವರೆಗೆ ಫೀಡರ್-76 ರ ವ್ಯಾಪ್ತಿಯ ಮೋರ್‌ಗಲ್ಲಿ, ವಟ್ಟಪ್ಪಗೆರೆ, ಕುಣಿಟಾನ ಮಸೀದಿ, ದಾನಪ್ಪ ಸ್ಟೀಟ್ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ.09 ರಂದು ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ :

ಬಳ್ಳಾರಿ ನಗರ ಜೆಸ್ಕಾಂ ಉಪ ವಿಭಾಗ-1 ಹಾಗೂ 2ರ ವ್ಯಾಪ್ತಿಯ ವಿದ್ಯುತ್ ಸಂಬಂಧಿಸಿದಂತೆ ಕುಂದು-ಕೊರತೆ ಇದ್ದಲ್ಲಿ ಬಗೆಹರಿಸಲು ಬಳ್ಳಾರಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರ ಅಧ್ಯಕ್ಷತೆಯಲ್ಲಿ ಏ.09 ರಂದು ಬೆಳಿಗ್ಗೆ 11 ಗಂಟೆಗೆ ವಲಯ ಕಚೇರಿಯ ಮೊದಲ ಮಹಡಿಯಲ್ಲಿರುವ ಸಭಾಂಗಣದಲ್ಲಿ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ಸಭೆ ಆಯೋಜಿಸಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *