ಬೆಂಗಳೂರು: ಬಳ್ಳಾರಿ ಜೀನ್ಸ್ ಫ್ಯಾಕ್ಟರಿ ಮಾಲೀಕರ ಸಂಕಷ್ಟಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ. ಅವರ ಮನವಿಯನ್ನ ಪುರಸ್ಕರಿಸಿದ್ದು, ಫ್ಯಾಕ್ಟರಿಗಳ ಓಪನ್ ಗೆ ಅನುಮತಿ ನೀಡಿದ್ದಾರೆ. ಸಿಎಂ ಸಭೆ ಸಫಲವಾಗಿದೆ. ಈ ಮೂಲಕ ಬಳ್ಳಾರಿ ಜೀನ್ಸ್ ಮಾಲೀಕರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಬಂದ್ ಆಗಿದ್ದಂತ 36 ಕಾರ್ಖಾನೆಗಳ ಆರಂಭಕ್ಕೆ ಆದೇಶವನ್ನು ಮಾಡಿದ್ದಾರೆ. ನಿನ್ನೆಯಷ್ಟೇ ಸಭೆ ಮಾಡಿದ್ದು, ಇಂದು ಕಾರ್ಖಾನೆಗಳ ಕೆಲಸಕ್ಕೆ ಓಕೆ ಎಂದಿದ್ದಾರೆ. ಜೀನ್ಸ್ ಫ್ಯಾಕ್ಟರಿ ಕಾರ್ಖಾನೆಗಳ ಮಾಲೀಕರ ಜೊತೆಗೆ ಈ ಸಭೆ ನಡೆದಿತ್ತು. CETP ಪ್ಲಾಂಟ್ ಇರುವ ಫ್ಯಾಕ್ಟರಿಗಳಿಗೆ ತಕ್ಷಣಕ್ಕೆ ಅನುಮತಿಯನ್ನ ಕೊಡಲಾಗಿದೆ. ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡುವಂತೆ ಪರಿಸರ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆಯನ್ನ ನೀಡಿದ್ದಾರೆ. ಪ್ಲಾಂಟ್ ಹಾಕಲು ಸರ್ಕಾರದಿಂದ 22 ಕೋಟಿಯನ್ನು ಮಂಜೂರು ಮಾಡಲಾಗಿದೆ.
ಇದರಲ್ಲಿ KIADB ಯಿಂದ 11 ಕೋಟಿ, KKRDB ಯಿಂದ 11 ಕೋಟಿಯನ್ನು ನೀಡಲಾಗುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ಜೀನ್ಸ್ ಕಾರ್ಖಾನೆ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ. CETP ಪ್ಲಾಂಟ್ ಇರುವ ಕಾರ್ಖಾನೆಗಳು ಎಂದಿನಂತೆ ಕೆಲಸವನ್ನು ನಿರ್ವಹಿಸಲಿವೆ. ರಾಹುಲ್ ಗಾಂಧಿ ನೀಡಿದ ಭರವಸೆಯಿಂದ ಜೀನ್ಸ್ ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಅದಕ್ಕಾಗಿ ಈಗಾಗಲೇ ಭೂಸ್ವಾಧೀನ ಕೂಡ ಪೂರ್ಣವಾಗಿದೆ. ಬಳ್ಳಾರಿಗೆ ಕರೆಸಿ ರಾಹುಲ್ ಗಾಂಧಿ ಅವರನ್ನು ಕರೆಸಿ ಉದ್ಘಾಟನೆ ಮಾಡುವುದಕ್ಕೆ ತಯಾರಿ ನಡೆದಿದೆ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಜೀನ್ಸ್ ಕ್ಯಾಪಿಟಲ್ ಮಾಡ್ತೀವಿ ಎಂಬ ಮಾತನ್ನ ನೀಡಿದ್ದರು. ಸರ್ಕಾರ ಬಂದು ಎರಡೂವರೆ ವರ್ಷವಾದರೂ ಆ ಯೋಜನೆ ಏನಾಯ್ತು ಎಂಬ ಪ್ರಶ್ನೆಯ ನಡುವೆ ಇದೀಗ ಸಿಎಂ ಸಿದ್ದರಾಮಯ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

