ಸಾಕಷ್ಟು ವರ್ಷಗಳ ಹಿಂದಿನ ದೇವಸ್ಥಾನಗಳು ಆಗಾಗ ಕಾಣಿಸಿಕೊಳ್ಳುತ್ತಿರುತ್ತವೆ. ಇದೀಗ 40 ವರ್ಷದ ಹಿಂದಿನ ದೇವಸ್ಥಾನವೊಂದು ಬೆಳಗಾವಿಯಲ್ಲಿ ಪತ್ತೆಯಾಗಿದೆ. ಹುಕ್ಕೇರಿ ತಾಲೂಕಿನ ಹುನ್ನೂರ ಗ್ರಾಮ ಈ ಘಟನೆ ನಡೆದಿದೆ.
ವಿಠ್ಠಲ ದೇವಸ್ಥಾನ ಸುಮಾರು 40 ವರ್ಷಗಳ ಹಿಂದಿನದ್ದು. ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು. ಆದರೀಗ ಜಲಾಶಯದಲ್ಲಿದ್ದ ನೀರಿನ ಮಟ್ಟ ಕುಸಿದಿದೆ. ಈ ಹಿನ್ನೆಲೆ ಹಳೆಯ ದೇವಸ್ಥಾನ ಜನರಿಗೆ ದರ್ಶನ ನೀಡಿದೆ.
40 ವರ್ಷಗಳಲ್ಲಿ ಪ್ರಥಮ ಬಾರಿ ಇಡೀ ದೇವಸ್ಥಾನ ಜನರಿಗಾಗಿ ತೆರೆದುಕೊಂಡಿದೆ. 40ವರ್ಷ ನೀರಿನಲ್ಲಿದ್ದರೂ ದೇವಸ್ಥಾನ, ದೇವರ ಮೂರ್ತಿಗೆ ಯಾವುದೇ ಹಾನಿಯಾಗಿಲ್ಲ. ಈ ದೇವಸ್ಥಾನವನ್ನು 1951ರಲ್ಲಿ ನಿರ್ಮಾಣ ಮಾಡಲಾಗಿತ್ತು. ಇಡೀ ಕಲ್ಲಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೀಗ 40 ವರ್ಷಗಳಿಕ ದೇವಸ್ಥಾನ ಕಂಡಿದೆ. ದೇವಸ್ಥಾನ ವೀಕ್ಷಣೆಗೆ ಭಕ್ತರ ದಂಡು ಹರಿದು ಬರುತ್ತಿದೆ.