2025 ನೇ ಸಾಲಿನ BEd ಸೀಟು ಹಂಚಿಕೆ ಪಟ್ಟಿ ಪ್ರಕಟ

1 Min Read

ಬೆಂಗಳೂರು: 2025ನೇ ಸಾಲಿನ ಬಿ.ಇಡಿ ದಾಖಲಾತಿಯ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಕೇಂದ್ರಿಕೃತ ದಾಖಲಾತಿ ಘಟಕವು ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜಂಟಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2025ನೇ ಸಾಲಿನ ಬಿ.ಇಡಿ ದಾಖಲಾತಿ ಸಂಬಂಧ ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ನಲ್ಲಿ ಚೆಕ್ ಮಾಡಬಹುದಾಗಿದೆ.  https://schooleducation.karnataka.gov.in/.

ಉಳಿದಂತೆ ಅಭ್ಯರ್ಥಿಗಳು ಕಾಲೇಜುಗಳಿಗೆ ಸೇರ ಬಯಸಿದ್ದಲ್ಲಿ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಅನ್ನು ಬಳಸಿ ದಿನಾಂಕ 25-11-2025ರ ಇಂದಿನಿಂದ 5-12-2025ರವರೆಗೆ ನಿಗದಿತ ಶುಲ್ಕದ ಚಲನ್ ಅನ್ನು ಮುದ್ರಿಸಿಕೊಂಡು ಎಸ್ಬಿಐ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಪಾವತಿಸಬಹುದು. ಅದರ ಮೂಲ ಪ್ರತಿ ಹಾಗೂ ಇತರೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಂಬಂಧಿಸಿದ ಜಿಲ್ಲಾ ನೋಡೆಲ್ ಕೇಂದ್ರಕ್ಕೆ ತೆರಳಿ, ದಾಖಲಾತಿ ಪತ್ರವನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಮೊದಲ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕ್ಸ್ ಅನ್ನು ದಿನಾಂಕ 08-12-2025ರಂದು ಬಿಡುಗಡೆಗೊಳಿಸಲಾಗುವುದು.

 

ಇದರಂತೆ ಮೊದಲ ಪಟ್ಟಿಯಲ್ಲಿ ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸದವರು Opted for the second round ಎಂದು ಅಭಿಮತವನ್ನು ದಾಖಲಿಸಿದ ಅಭ್ಯರ್ಥುಗಳು ತಮ್ಮ ಎರಡನೇ ಮತ್ತು ಕೊನೆಯ ಸೀಟಿ ಹಂಚಿಕೆಗಾಗಿ ದಿನಾಂಕ 08-12-2025ರಿಂದ ದಿನಾಂಕ 10-12-2025ರವರೆಗೆ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಕಾಲೇಜುಗಳ ಆಯ್ಕೆಯ Option Entry ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

Share This Article
Enable Notifications OK No thanks