ಮಾತನಾಡುವ ಭರದಲ್ಲೋ, ಹೇಳಿಕೆ ನೀಡುವ ಭರದಲ್ಲೋ ಹೇಳಿಕೆಗಳು ಕಂಟ್ರೋಲ್ ತಪ್ಪಿದರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದು ಈಗಾಗಲೇ ಕೆಲವು ರಾಜಕೀಯ ನಾಯಕರ ಅರಿವಿಗೆ ಬಂದಿದೆ. ಆದರೆ ಕಾಂಗ್ರೆಸ್ ನಾಯಕರೊಬ್ಬರು ಪ್ರಧಾನಿ ಮೋದಿ ವಿಚಾರವಾಗಿ ಕೊಲೆಯ ಹೇಳಿಕೆಯನ್ನು ನೀಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಾಂಗ್ರೆಸ್ ನಾಯಕನ ಹೇಳಿಕೆಗೆ ಎಲ್ಲರೂ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಾಜಿ ಸಚಿವ ರಾಜಾ ಪಟೇರಿಯಾ ಅವರು ಪ್ರಧಾನಿ ಬಗ್ಗೆ ಈ ರೀತಿಯಾದ ಹೇಳಿಕೆ ನೀಡಿದ್ದಾರೆ. ವೈರಲ್ ಆದಂತ ವಿಡಿಯೋದಲ್ಲಿ ಪಡೇರಿಯಾ ಅವರು, ಮುಂದೊಂದು ದಿನ ಪ್ರಧಾನಿ ಮೋದಿ ಅವರು ಚುನಾವಣಾ ಪ್ರಕ್ರಿಯೆಗಳಿಗೆ ಅಂತ್ಯವಾಡುತ್ತಾರೆ. ಮೋದಿ ಧರ್ಮ, ಜಾತಿ ಆಧಾರ ಮೇಲೆ ದೇಶವನ್ನು ವಿಭಜನೆ ಮಾಡುತ್ತಾರೆ. ದಲಿತರು, ಬುಡಕಟ್ಟುಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಅಪಾಯದಲ್ಲಿದೆ. ಹೀಗಾಗಿ ಪ್ರಧಾನಿ ಮೋದಿಯನ್ನು ಕೊಲೆ ಮಾಡುವುದಕ್ಕೆ ಸಿದ್ದರಾಗಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದೀಗ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪಟೇರಿಯಾ, ತಾವೂ ಬಳಸಿದ ಕೊಲೆ ಪದವನ್ನು ಚುನಾವಣೆಯ ಸೋಲಿಗೆ ಹೋಲಿಕೆ ಮಾಡಿದ್ದಾರೆ. ಮರ್ಡರ್ ಎಂದರೆ ಸೋಲು ಎಂದು ವ್ಯಾಖ್ಯಾನಿಸಿದ್ದಾರೆ.