ನವದೆಹಲಿ: ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ರ ಮುದ್ದಿನ ಒಬ್ಬಳೆ ಮಗಳಹ ಆರಾಧ್ಯ. ಈಗಿನ್ನು ಹನ್ನೊಂದು ವರ್ಷ. ಆದರೆ ಯೂಟ್ಯೂಬರ್ಸ್ ಕಾಟಕ್ಕೆ ಬೇಸತ್ತು, ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಆರಾಧ್ಯಗೆ ಬಿಗ್ ರಿಲೀಫ್ ನೀಡಿದೆ. ಯೂಟ್ಯೂಬರ್ಸ್ ಗೆ ಎಚ್ಚರಿಕೆ ನೀಡಿದೆ.
ಆರಾಧ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಕೋರ್ಟ್, ಒಂಭತ್ತು ಯೂಟ್ಯೂಬ್ ಚಾನೆಲ್ ಗೆ ನಿರ್ಬಂಧ ವಿಧಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಹರಿಶಂಕರ್, ನೇತೃತ್ವದ ಪೀಠವು, ಆರಾಧ್ಯಗೆ ಸಂಬಂಧಿಸಿದಂತೆ ಯಾವುದೇ ಸುದ್ದಿಯನ್ನು ಯೂಟ್ಯೂಬ್ ಚಾನೆಲ್ ಗಳು ಮಾಡದಂತೆ ತಿಳಿಸಿದೆ. ಸಾಮಾನ್ಯ ಮಕ್ಕಳಾಗಿರಲಿ ಅಥವಾ ಸೆಲೆಬ್ರಿಟಿ ಮಕ್ಕಳಾಗಿರಲಿ ಅವರನ್ನು ತಪ್ಪು ದಾರಿಗೆಳೆಯುವ ಮಾಹಿತಿ ಪ್ರಸಾರ ಮತ್ತು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದನ್ನು ಕಾನೂನು ಸಹಿಸುವುದಿಲ್ಲ. ಈಗಾಗಲೇ ಅವರ ಬಗ್ಗೆ ಯೂಟ್ಯೂಬ್ ನಲ್ಲಿ ಹಾಕಿರುವಂತ ಸುದ್ದಿಗಳನ್ನು ತೆಗೆದು ಹಾಕಬೇಕೆಂದು ಕೋರ್ಟ್ ತಿಳಿಸಿದೆ.
ಸದ್ಯ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಪರ ವಕೀಲರು ಆರಾಧ್ಯಾರ ಬಗ್ಗೆ ಅಪ್ಲೋಡ್ ಆಗಿದ್ದ ಸುದ್ದಿಗಳ ಕ್ಲಿಪ್ ಗಳನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ. ಎಲ್ಲವನ್ನು ಪರಿಶೀಲಿಸಿದ ಕೋರ್ಟ್ ತೀರ್ಪು ನೀಡಿದೆ.