ಬೆಂಗಳೂರು: ಯಾವುದೇ ರೀತಿಯ ಅಪ್ಡೇಟ್ ಆಗಲಿ ಕಡೆ ಗಳಿಗೆಯಲ್ಲಿಯೇ ಎಲ್ಲರೂ ಓಡಾಡುವುದು. ಇದೀಗ ಅಂಥದ್ದೇ ಟೆನ್ಶನ್ ವಾಹನ ಮಾಲೀಕರಿಗೆ ಸೃಷ್ಟಿಯಾಗಿದೆ. ತಮ್ಮ ತಮ್ಮ ವಾಹನಗಳಿಗೆ ಅತಿ ಸುರಕ್ಷಿತ ನಂಬರ್ ಪ್ಲೇಟ್ (HSRP) ಹಾಕಿಸಬೇಕಾಗಿದೆ. ಅದಕ್ಕೆ ಐದು ದಿನಗಳು ಮಾತ್ರ ಸಮಯವಿದೆ. ಈ ಐದು ದಿನಗಳ ಒಳಗೆ ನಂಬರ್ ಪ್ಲೇಟ್ ಹಾಕಿಸಬೇಕಾಗಿದೆ. ವಂಚನೆ ಮಾಡುವವರು ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ. ಇದೀಗ ನಂಬರ್ ಪ್ಲೇಟ್ ವಿಚಾರವನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ. ಈ ಮೂಲಕ ವಂಚನೆ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.
ಫೆಬ್ರವರಿ 17ರ ಒಳಗೆ ಈ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅನ್ನು ಹಾಕಿಸಬೇಕಾಗುತ್ತದೆ. ಇಲ್ಲವಾದರೇ ಭಾರೀ ಮೊತ್ತದೆ ದಂಡ ಬೀಳಲಿದೆ. ಹೀಗಾಗಿ ವಾಹನ ಸವಾರರು ಎದ್ದು ಬಿದ್ದು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಿಸಿಕೊಳ್ಳುತ್ತಿದ್ದಾರೆ. ಇದು ವಂಚನೆ ಕೋರರಿಗೆ ಬಹಳ ಸುಲಭದ ಮಾರ್ಗವಾಗಿ ಬಿಟ್ಟಿದೆ. ಹಿರಿಯ ನಾಗರಿಕರನ್ನು ಆನ್ಲೈನ್ ನಲ್ಲಿ ವಂಚಿಸುತ್ತಿರುವ ಪ್ರಕರಣಗಳು ಬಯಲಿಗೆ ಬಂದಿವೆ.
ಹಿರಿಯ ನಾಗರಿಕರು ಅಂತ ಅಲ್ಲ ಯುವಕರನ್ನು ಯಾಮಾರಿಸುವುದು ವಂಚಕರಿಗೇನು ಕಷ್ಟವಲ್ಲ. ಹೀಗಾಗಿ ವಂಚನೆಗೆ ಒಳಗಾಗಬಾರದು ಎಂದರೆ ಎಚ್ಚರದಿಂದ ಇರುವುದು ಬಹಳ ಒಳ್ಳೆಯದು. ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ವಿಚಾರಕ್ಕೆ ಯಾರಾದರೂ ನಿಮಗೆ ಕಾಲ್ ಮಾಡಿ, ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಕೇಳುವುದು. ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಬಗ್ಗೆ ಇಲ್ಲವೇ ಎಟಿಎಂ ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಕೊಡಬೇಡಿ. ಹಾಗೇ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಅಂದ್ರೆ ಒನ್ ಟೈಂ ಪಾಸ್‌ವರ್ಡ್ ಕೊಡಲು ಹೋಗಲೇಬೇಡಿ.