ಬೀದರ್: ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಮೂರನೆ ಅಲೆಯ ಆತಂಕವನ್ನ ಸೃಷ್ಟಿ ಮಾಡಿದೆ. ಹೀಗಾಗಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಈ ಬಗ್ಗೆ ಸಚಿವ ಭಗವಂತ ಖೂಬಾ ಮಾತನಾಡಿದ್ದು, ಕೊರೊನಾಗೆ ಸಂಬಂಧಿಸಿದಂತೆ ಯಾವ ರೀತಿಯ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಬೇಕು ಅನ್ನೋದು ಸರ್ಕಾರಕ್ಕೆ ಗೊತ್ತು. ಆದ್ರೆ ಮೊದಲು ನಾಗರಿಕರು ಎಚ್ಚರದಿಂದಿರಬೇಕು. ಎಲ್ಲಾ ನಾಗರಿಕರು ಕೊರೊನಾ ನಿಯಮಗಳನ್ನ ಅನುಸರಿಸಬೇಕು. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಬಾರದೆ ಇರುವಂತೆ ಜಾಗೃತಿ ವಹಿಸಬೇಕು. ತಜ್ಞರು ಕೊಟ್ಟಿರುವ ವರದಿಯ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ ಎಂದಿದ್ದಾರೆ.
ಇನ್ನು ಇಂದಿನಿಂದ 15-17 ವರ್ಷದ ಮಕ್ಕಳಿಗೂ ಇಂದಿನಿಂದ ಲಸಿಕೆ ನೀಡುವ ಅಭಿಯಾನಕ್ಕೆ ಇಂದಿನಿಂದ ಚಾಲನೆ ನೀಡಲಾಗಿದೆ. ಈ ಲಸಿಕೆಯ ಬಗ್ಗೆ ಎಲ್ಲಾ ಮಕ್ಕಳಲ್ಲೂ ಆಸಕ್ತಿ ಮೂಡಬೇಕು. ಮಕ್ಕಳಲ್ಲಿ ಇಂದು ಕಂಡ ಆಸಕ್ತಿ ನೋಡಿ ಸಂತಸವಾಗಿದೆ. ಎಲ್ಲಾ ಮಕ್ಕಳು ಲಸಿಕೆಯನ್ನ ಹಾಕಿಸಿಕೊಳ್ಳಬೇಕು ಎಂದಿದ್ದಾರೆ.