ಗದಗ: ಸಿಎಂ ಬಸವರಾಜ್ ಬೊಮ್ಮಾಯಿ ಎಲ್ಲಾ ಜಿಲ್ಲೆಗೂ ಉಸ್ತುವಾರಿಗಳನ್ನ ನೇಮಕ ಮಾಡಿದೆ. ಆದ್ರೆ ಈ ಬಾರಿ ಎಲ್ಲರನ್ನು ಅದಲು ಬದಲು ಮಾಡಿದ್ದಾರೆ. ಇದು ಕೆಲವು ಸಚಿವರಿಗೆ, ಬೆಂಬಲಿಗರಿಗೆ ಅಸಮಾಧಾನ ತಂದಿದೆ. ಗದಗ ಜಿಲ್ಲಾ ಉಸ್ತುವಾರಿಯನ್ನಾಗಿ ಸಚಿವ ಬಿ ಸಿ ಪಾಟೀಲ್ ಅವರನ್ನ ನೇಮಕ ಮಾಡಲಾಗಿದೆ.
ಉಸ್ತುವಾರಿಯಾಗಿ ನೇಮಕಗೊಂಡು ಮೊದಲ ಬಾರಿಗೆ ಸಚಿವ ಬಿ ಸಿ ಪಾಟೀಲ್ ಗದಗಕ್ಕೆ ಭೇಟಿ ನೀಡಿದ್ದರು. ಆದ್ರೆ ಅಲ್ಲಿನ ವಾತಾವರಣ ನೋಡಿದಾಗ ಇನ್ನು ಆ ಅಸಮಾಧಾನದ ಕಿಡಿ ಹೊಗೆಯಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಯಾಕಂದ್ರೆ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಬರ್ತಾರೆ ಅಂದ್ರೆ ಅಲ್ಲಿ ಶಾಸಕರು, ಬೆಂಬಲಿಗರು ಸೇರಿ ಅದ್ದೂರಿ ಸ್ವಾಗತ ಮಾಡ್ತಾರೆ. ಆದ್ರೆ ಬಿ ಸಿ ಪಾಟೀಲ್ ಹೋದಾಗ ಸ್ವತಃ ಪಕ್ಷದವರೇ ಅವರನ್ನ ಸ್ವಾಗತ ಮಾಡಲು ಬಂದಿರಲಿಲ್ಲ. ಅದೆಲ್ಲವನ್ನು ಗಮನ ಹರಿಸದೇ ಬಿ ಸಿ ಪಾಟೀಲ್ ಡಿಸಿ ಕಚೇರಿ ಎದುರು ನಿರ್ಮಾಣವಾಗ್ತಿರುವ ಬಿಜೆಪಿ ಕಟ್ಟಡ ವೀಕ್ಷಣೆ ಮಾಡಿ, ಬಳಿಕ ಪುಟ್ಟರಾಜ ಗವಾಯಿಗಳ ಆಸ್ರಮಕ್ಕೆ ಹೋಗಿದ್ದರು. ನಂತರ ಜಿಲ್ಲೆಯ ಪ್ರಗತಿಪರ ಸಭೆ ನಡೆಸಿದ್ದಾರೆ.
ಈ ಮೂಲಕ ಇನ್ನು ಉಸ್ತುವಾರಿ ಸಚಿವರ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿರುವುದು ಕಂಡು ಬಂದಿದೆ. ಹಾಗೇ ಗದಗಕ್ಕೆ ಶ್ರೀರಾಮುಲು ಅವರನ್ನ ನೇಮಕ ಮಾಡಿ ಅಥವಾ ಸಿಸಿ ಪಾಟೀಲ್ ಅವರನ್ನ ಮುಂದುವರೆಸಿ ಅಂತ ಪಟ್ಟು ಹಿಡಿದಿದ್ದಾರೆ.