ಕೊರೊನಾ ಹೆಚ್ಚಳ ಹಿನ್ನೆಲೆ : ಬೆಂಗಳೂರಿನಲ್ಲಿ ಅಲರ್ಟ್ ಆಗಿರಲು ಗೌರವ್ ಗುಪ್ತ ಸೂಚನೆ

1 Min Read

 

ಬೆಂಗಳೂರು: ಬೇರೆ ದೇಶಗಳಲ್ಲಿ‌ ಕೊರೊನಾ ಹೆಚ್ಚಳವಾಗ್ತಿದೆ. ಈ ನಡುವೆ ರಾಜ್ಯದಲ್ಲೂ ಧಾರವಾಡ ಹಾಗೂ ಆನೇಕಲ್ ನ ಕಾಲೇಜಲ್ಲಿ ಕೊರೊನಾ ವೈರಸ್ ಇರುವ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಇದು ಉಳಿದವರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಆಯುಕ್ತ ಗೌರವದ ಗುಪ್ತ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಹಾಗೂ ಹೊಸ ಮಾದರಿಯ ಸೋಂಕು ಪ್ರಕರಣಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪ್ರಮುಖ‌ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ತಂಡಗಳನ್ನು‌ ನಿಯೋಜಿಸಿ ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಕಡ್ಡಾಯ ಪರೀಕ್ಷೆ ಮಾಡಬೇಕು ಎಂದು ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಕೋವಿಡ್ ಸೋಂಕು ಸಂಬಂಧಿಸಿದಂತೆ ವರ್ಚುವಲ್ ಮೂಲಕ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಹೊರ ವಲಯ ಗಡಿ ಭಾಗದಲ್ಲಿ ಕೋವಿಡ್ ಪರೀಕ್ಷೆ ಮಾಡುವ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದ್ದು, ಕೋವಿಡ್ ಹಾಗೂ ಹೊಸ ಮಾದರಿಯ ಸೋಂಕು ಪ್ರಕರಣಗಳು ಹರಡದಂತೆ ಮುನ್ನಚ್ಚರಿಕಾ ಕ್ರಮಗಳನ್ನು ವಹಸಿಬೇಕು ಎಂದಿದ್ದಾರೆ.

ನಗರದಲ್ಲಿ‌ ಕಳೆದ ವಾರದಿಂದ ಸರಾಸರಿ 160 ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, 26 ರಂದು(ನಿನ್ನೆ) 224 ಕೋವಿಡ್ ಪ್ರಕರಣಗಳು ಕಂಡುಬಂದಿವೆ. ಈ ಪೈಕಿ ಆನೇಕಲ್ ವ್ಯಾಪ್ತಿಯಲ್ಲಿ‌ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಆ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ತಿಳಿಸಿದ್ದಾರೆ.

ನಗರದ ಯಾವ ಭಾಗದಲ್ಲೂ ಕ್ಲಸ್ಟರ್ ಗಳು ವರದಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ 63 ಕಂಟೈನ್ಮೆಂಟ್ ಜೋನ್ ಗಳಿದ್ದು, ಅವುಗಳ ಮೇಲೆ ನಿಗಾವಹಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜಿನೋಮ್ ಸೀಕ್ವೆನ್ಸಿಂಗ್ ಮಾಡಿ ಬೇರೆ ಯಾವುದಾದರು ವೈರಾಣು ಪತ್ತೆಯಾಗಿದೆಯೆ ಎಂಬುದನ್ನು ಪರಿಶೀಲಿಸಲು ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *