ಡಿಸೆಂಬರ್ 25ಕ್ಕೆ ಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನವೇ ಅದ್ಬುತ ರೆಸ್ಪಾನ್ಸ್ ಅನ್ನು ಕೂಡ ಪಡೆದುಕೊಂಡಿತ್ತು. ಸಿನಿಮಾದಲ್ಲಿ ಮಾಸ್ ಎಂಟ್ರಿ ಕೊಟ್ಟಿದ್ದರು ಕಿಚ್ಚ ಸುದೀಪ್. ಈ ಕಾರಣದಿಂದಾನೇ ಸುದೀಪ್ ಗೆಳೆಯರ ಬಳಗ ಕೇಕ್ ಕಟ್ ಮಾಡಿಸಿ, ಸಂಭ್ರಮಾಚರಣೆ ಮಾಡಿದರು. ಕೇಕ್ ಮೇಲೆ ಬಾಸಿಸಂ ಕಾಲ ಮುಗೀತು ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು ಎಂದು ಬರೆದಿದ್ದರು. ಈ ಕೇಕ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ದರ್ಶನ್ ಗೆ ಸುದೀಪ್ ಫ್ಯಾನ್ಸ್ ಟಾಂಗ್ ಕೊಟ್ರು ಅಂತ ದರ್ಶನ್ ಫ್ಯಾನ್ಸ್ ಕೂಡ ಕೇಕ್ ಕಟ್ ಮಾಡಿ ಟಾಂಗ್ ಕೊಟ್ಟರು. ಇದೀಗ ಹೊತ್ತಿಕೊಂಡ ಸ್ಟಾರ್ ವಾರ್ ಅನ್ನ ಸುದೀಪ್ ತಣ್ಣಗೆ ಮಾಡಿದ್ದಾರೆ. ಹಾಗೇ ಆ ವಿಚಾರವನ್ನ ಗಾಸಿಪ್ ಮಾಡಿದವರಿಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.
ಮ್ಯಾಕ್ಸ್ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಮಾತನಾಡಿದ ಕಿಚ್ಚ, ‘ಮ್ಯಾಕ್ಸ್ ಸಿನಿಮಾ ನೋಡಿದ ನನ್ನ ಗೆಳೆಯ ಇನ್ಮೇಲೆ ಮಾಸ್ ಕಾಲ ಶುರು ಎಂಬ ಅರ್ಥದಲ್ಲಿ ಕೇಕ್ ಮೇಲೆ ಬರೆಸಿದ್ದರು. ಅದು ಸಿನಿಮಾದಲ್ಲಿ ಇದ್ದದ್ದು. ಆದರೆ ಅದನ್ನ ಇನ್ಯಾರಿಗೋ ಟಾಂಗ್ ಎಂಬಂತೆ ಒಂದು ಚಾನೆಲ್ ಸುದ್ದಿ ಮಾಡಿತು. ಆ ಸುದ್ದಿಯಿಂದ ಇನ್ಯಾರಿಗೋ ಸಮಸ್ಯೆ ಆದರೆ, ನಾವೂ ಆಗೋದಕ್ಕೆ ಬಿಡಲ್ಲ. ಆದರೂ ಸಮಸ್ಯೆ ಆದರೆ ಆ ಚಾನೆಲ್ ನವರು ಜವಾಬ್ದಾರಿ ತೆಗೆದುಕೊಳ್ತಾರಾ. ಯಾಕಂದ್ರೆ ಮೊದಲು ಶುರು ಮಾಡಿದ್ದೆ ಅವರು.
ನಾವೂ ಯಾರಿಗೂ ಯಾರು ಟಾಂಗ್ ಕೊಡಬೇಕಾಗಿಲ್ಲ. ಚಿತ್ರರಂಗದಲ್ಲಿ ಇರುವವರೆಲ್ಲ ನಮ್ಮ ಸಹೋದರರು. ಎಲ್ಲರೂ ಅವರವರ ನೋವಿನಲ್ಲಿ ಇರುತ್ತಾರೆ. ಅವರನ್ನು ಅವರ ಪಾಡಿಗೆ ಬಿಡಬೇಕು. ಉರಿಯುವ ಬೆಂಕಿಗೆ ಎಣ್ಣೆ ಹಾಕಬಾರದು. ಆಗಿರುವ ಗಾಯಕ್ಕೆ ಉಪ್ಪು ಹಾಕಬಾರದು. ಇದನ್ನೆಲ್ಲ ಬಿಡೋಣಾ. ಮನಸೊಳಗೆ ನಗೋಣಾ, ಖುಷಿಯಾಗಿರೋಣಾ. ಯಶ್, ದರ್ಶನ್, ಧ್ರುವ, ಉಪ್ಪಿ ಸರ್, ಶಿವಣ್ಣ ಎಲ್ಲರೂ ಸೇರಿದರೇನೆ ಚಿತ್ರರಂಗ. ನನ್ನ ಹಾಗೂ ದರ್ಶನ್ ನಡುವೆ ಏನೇನು ಇಲ್ಲ. ನನ್ನ ಫ್ಯಾನ್ಸ್ ದರ್ಶನ್ ಸಿನಿಮಾ ನೋಡ್ತಾರೆ. ಅವರ ಫ್ಯಾನ್ಸ್ ನನ್ನ ಸಿನಿಮಾ ನೋಡ್ತಾರೆ’ ಎಂದಿದ್ದಾರೆ.