ಗೃಹಲಕ್ಷ್ಮೀ ಯೋಜನೆ ಮೂಂದೂಡಿಕೆಗೆ ಬಸವರಾಜ್ ಬೊಮ್ಮಾಯಿ ಬೇಸರ

1 Min Read

ಹುಬ್ಬಳ್ಳಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೃಹಲಕ್ಷ್ಮಿಗೆ ದಿನಾಂಕದ ಮೇಲೆ ದಿನಾಂಕ ಮಂದೂಡುತ್ತಿದ್ದಾರೆ. ಯೋಜನೆಯನ್ನು ಅನುಷ್ಠಾನ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ರಾಜ್ಯದ ಹೆಣ್ಣು ಮಕ್ಕಳಿಗೆ ಭಮನಿರಸ ಮಾಡುವ ಉದ್ದೇಶ ನಡೆಯುತ್ತಿದೆ.

ಸದನದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಗಂಭೀರ ಚರ್ಚೆ ಮಾಡುತ್ತೇವೆ. ಜೆಡಿಎಸ್ ಜೊತೆ ನಮ್ಮ ಮೈತ್ರಿ ಮಾಡಿಕೊಳ್ಳುವುದು ವರಿಷ್ಠರಿಗೆ ಬಿಟ್ಟದ್ದು. ನಮ್ಮ ವರಿಷ್ಠರು ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿ ಆಧಾರದ ಮೇಲೆ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ. ಜುಲೈ 18ರ ಒಳಗೆ ವಿಪಕ್ಷ ನಾಯಕರ ಘೋಷಣೆ ಆಗಬಹುದು ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಆ ಬಗ್ಗೆಯೂ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, ಬೆಂಗಳೂರಿನಲ್ಲಿ 2 ದಿನ ಸಭೆ ಮಾಡ್ತಿದ್ದಾರೆ. ಪ್ರತಿಪಕ್ಷಗಳ ಸಭೆಯಿಂದ ಯಾವುದೇ ಲಾಭ ಆಗಲ್ಲ. ಪ್ರತಿ ಪಕ್ಷಗಳಿಗೆ ಸ್ವಂತ ಬಲವಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *