Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಸವಣ್ಣನವರು ಎಲ್ಲ ಜಾತಿ ಜನಾಂಗದವರನ್ನು ಒಂದೆಡೆ ಸೇರಿಸಿ ಜ್ಞಾನ ದಾಸೋಹ ಉಣ ಬಡಿಸಿದರು :ಡಾ. ಅಜಯ್ ಧರ್ಮಸಿಂಗ್

Facebook
Twitter
Telegram
WhatsApp

ಚಿತ್ರದುರ್ಗ, (ಆ.05) :  ಬಸವಣ್ಣನವರು ಎಲ್ಲ ಜಾತಿ ಜನಾಂಗದವರನ್ನು ಒಂದೆಡೆ ಸೇರಿಸಿ ಜ್ಞಾನ ದಾಸೋಹ ಉಣ ಬಡಿಸಿದರು. ಮುರುಘಾ ಶರಣರು ಅವರ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾಕ್ಟರ್ ಅಜಯ್ ಧರ್ಮಸಿಂಗ್ ಹೇಳಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಎಸ್ ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಚಿತ್ರದುರ್ಗ ಇವರ ಸಹಯೋಗದಲ್ಲಿ ಮೂವತ್ತೆರಡು ವರ್ಷದ ಎಂಟನೆ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಸುಮಾರು ಹದಿನೇಳು ಸಾವಿರ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ವಿವಾಹವಾಗಿರುವುದು ದಾಖಲೆ ಯಾದುದು ಎಲ್ಲಿಯೂ ಪ್ರತಿ ತಿಂಗಳು ವಿವಾಹ ಮಾಡುವ ಪದ್ಧತಿಯಿಲ್ಲ.

ಆಷಾಢ ರಾಹುಕಾಲ ಇಂತಹ ಯಾವುದೇ ಯಾವುದೇ ಮೌಢ್ಯಕ್ಕೆ ಆಸ್ಪದ ಕೊಡದೆ ಶರಣರು ಕಲ್ಯಾಣ ಮಹೋತ್ಸವ ನಡೆಸಿಕೊಡುತ್ತಿದ್ದಾರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಅತ್ಯಂತ ಸಂತಸವಾಗಿದೆ ಎಂದರು .ರಾಣೇಬೆನ್ನೂರು ಸಿದ್ಧಾರೂಢ ಆಶ್ರಮದ ಮರುಳಶಂಕರ ಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿ ಜಾತಿ ಜನಾಂಗದ ಭೇದ ಭಾವ ಇಲ್ಲದೆ ಶ್ರೀಗಳು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

ನವ ವಧು ವರರು ಇಲ್ಲಿ ವಿವಾಹವಾಗುತ್ತಿರುವುದು ನಿಮ್ಮ ಪುಣ್ಯವೇ ಸರಿ ನನ್ನಂಥವರಿಗೂ ಪ್ರವರ್ಗ ಒಂದರಲ್ಲಿ ಮುಸ್ಲಿಂ ಬಾಂಧವರು ನನ್ನನ್ನು ದೀಕ್ಷೆಕೊಟ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರಣೆ ನೀಡಿದರು .ಬಸವತತ್ವದ ಅಪ್ಪಟ ಅಭಿಮಾನಿಗಳಾದ ಶ್ರೀಗಳು ಹನ್ನೆರಡನೆ ಶತಮಾನದ ತತ್ತ್ವ ಸಿದ್ಧಾಂತಗಳನ್ನು ಯಥಾವತ್ತಾಗಿ ಮುಂದುವರಿಸಿದ್ದಾರೆ ಎಂದು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಡಾಕ್ಟರ್ ಶಿವಮೂರ್ತಿ ಮುರುಘಾ ಶರಣರು ಬಡವರ ಕಲ್ಯಾಣ ಮಾಡುವಲ್ಲಿ ದೇವರಿದ್ದಾರೆ ಇದು ಪಾವನ ಸಂದರ್ಭ ಮಾನವನ ಆಯುಷ್ಯ ತುಂಬಾ ಕ್ಷಣಿಕವಾದುದು ಈ ಸಂದರ್ಭದಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕು ಸಾಯುವುದೇ ಸಾಧನೆ ಅಲ್ಲ ಸಾಯುವವರೆಗೆ ಸಾಹಸ ಮಾಡಬೇಕು ಸಾವಿಗೆ ಗೌರವ ತರುವಂತಹ ಸತ್ಕಾರ್ಯಗಳನ್ನು ಮಾಡಬೇಕು .ವ್ಯಕ್ತಿ ಸಾಯಬಹುದು ಆದರೆ ಆತ ಮಾಡುವ ಕಾರ್ಯಗಳು ಎಂದೂ ಸಾಯುವುದಿಲ್ಲ ಉತ್ತಮ ಸಾಧನೆ ಮಾಡಬೇಕು ಸಂಸಾರಿಯೂ ಕೂಡ ಸತ್ಕಾರ್ಯಗಳನ್ನು ಮಾಡಲು ಬರುತ್ತದೆ ನವದಂಪತಿಗಳಾದ ನೀವು ಸಹಕಾರ ಸತ್ಕಾರ್ಯ ಮೊದಲು ನಿಮ್ಮ ಬದುಕನ್ನು ಬಳಸಿಕೊಳ್ಳಿ ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಪಿಳ್ಳೇಕೆರೆನಹಳ್ಳಿ ಬಳಿ ಅಂಡರ್ ಪಾಸ್ ನಿರ್ಮಿಸಿ : ಶಾಸಕ ವೀರೇಂದ್ರ ಸೂಚನೆ

  ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.23 : ಪಿಳ್ಳೇಕೆರೆನಹಳ್ಳಿ ಗ್ರಾಮದ ಬಳಿ ಸ್ಕೈವಾಕರ್ ನಿರ್ಮಿಸುವ ಬದಲಾಗಿ ಅಂಡರ್ ಪಾಸ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸೂಚಿಸಿದ್ದಾರೆ.

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಡಿಸೆಂಬರ್ 23 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 23 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ( ಡಿಸೆಂಬರ್. 23 ರ, ಸೋಮವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ

ಚಿತ್ರದುರ್ಗ | ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನೆರವೇರಿದ 25 ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಡಿ. 23 : ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 25 ನೇ ವರ್ಷದ ಬ್ರಹ್ಮೋತ್ಸವ

error: Content is protected !!