in ,

ಬಸವಣ್ಣ ವಿಶ್ವಕ್ಕೆ ಜ್ಯೋತಿಯಾದವರು : ಶ್ರೀ ಬಸವಪ್ರಭು ಸ್ವಾಮಿಗಳು

suddione whatsapp group join

ಚಿತ್ರದುರ್ಗ, ಸುದ್ದಿಒನ್, (ಏ.23) : ಮಹಾಮಾನವತಾವಾದಿ ಬಸವೇಶ್ವರರು ಜಾತಿ ವ್ಯವಸ್ಥೆ ಹೋಗಲಾಡಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಕಾಯಕ ಮತ್ತು ಸಮಾನತೆಯ ಮಹತ್ವವನ್ನು ಜಗತ್ತಿಗೆ ಸಾರಿದರು ಎಂದು ಮುರುಘಾಮಠದ ಆಡಳಿತಾಧಿಕಾರಿ ಪಿ.ಎಸ್ ವಸ್ತ್ರದ ಹೇಳಿದರು.

ಶ್ರೀ ಮುರುಘರಾಜೇಂದ್ರಮಠದಲ್ಲಿ ಭಾನುವಾರ ನಡೆದ ಬಸವ ಜಯಂತಿ ಸಮಾರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಬಸವಣ್ಣನವರು ಅರ್ಚಕ ಅಥವಾ ಪುರೋಹಿತ ವ್ಯವಸ್ಥೆಯನ್ನು ನಿರಾಕರಿಸಿದರು. ನಾವು ಇನ್ನೊಬ್ಬರ ಮೇಲೆ ಅವಲಂಬನೆ ಆಗದೆ ಸ್ವತಂತ್ರರಾಗಬೇಕು.

ಅಕ್ಷಯ ತೃತೀಯದಲ್ಲಿ ಬಂಗಾರ ಬೆಳ್ಳಿ ತೆಗೆದುಕೊಂಡರೆ ದುಪ್ಪಟ್ಟು ಆಗುತ್ತದೆ ಎಂಬುದಕ್ಕಿಂತ ಈ ದಿನ ಒಂದಷ್ಟು ಜ್ಞಾನ ಪಡೆದರೆ ದುಪ್ಪಟ್ಟಾಗುವುದು. ಅನುಭವ ಮಂಟಪದಲ್ಲಿ ಅನೇಕ ವಿಚಾರಧಾರೆಗಳು ಇದ್ದವು. ಇಂದು ವಿಶ್ವ ಪುಸ್ತಕ ದಿನವೂ ಹೌದು ಹಾಗೂ ಮೊದಲನೆ ಇಮೇಲ್ ಡೇ ಕೂಡ. ಪ್ರತಿಯೊಬ್ಬರನ್ನು ಪ್ರೀತಿಸುವ ಗುಣ ನಮ್ಮದಾಗಬೇಕೆಂದರು.

ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಬಸವಣ್ಣ ವಿಶ್ವಕ್ಕೆ ಜ್ಯೋತಿಯಾದವರು. ಮಾನವ ಸಂಕುಲ ಉಳಿಯಬೇಕಾದರೆ ಬಸವತತ್ತ್ವ ಅಳವಡಿಸಿಕೊಳ್ಳಬೇಕು. ರಾಜ್ಯ ಮತ್ತು ರಾಷ್ಟ್ರದ ಜನರ ಮಧ್ಯೆ ಸಾಮರಸ್ಯ ಇರಬೇಕು. ಸಾಮರಸ್ಯಕ್ಕೆ ಸೇತುವೆಯಾದವರು ಬಸವಣ್ಣನವರು.

ಇವನಾರವ ಇವನಾರವ ಎನ್ನದೆ ಎಲ್ಲರೂ ನಮ್ಮವರು ಎನ್ನುವ ಭಾವನೆ ಮೂಡಬೇಕು. ಸ್ಥೂಲ ಶರೀರ, ಮನಸ್ಸು ಎಂಬ ಶರೀರ, ಭಾವ ಶರೀರ ಇವು ಮಾನವನ ಮೂರು ಶರೀರಗಳು. ಬಸವಣ್ಣನವರದು ಕಾಯಕತತ್ತ್ವ. ಕಾಯಕವಿಲ್ಲದೆ ಪ್ರಸಾದದ ಹಕ್ಕಿಲ್ಲ ಎಂದು ಪ್ರತಿಪಾದಿಸಿದರು.

ಬಸವ ಜಯಂತಿಗೆ ಸರ್ಕಾರ ರಜೆಯನ್ನು ನೀಡದೆ ಇನ್ನೂ ಎರಡು ಗಂಟೆ ಹೆಚ್ಚು ಕಾಯಕವನ್ನು ಮಾಡಲು ಅವಕಾಶ ನೀಡಿದರೆ ಅದು ಬಸವಣ್ಣನವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಬಸವಣ್ಣನವರ ಸ್ಮರಣೆ ನಿರಂತರವಾಗಿರಬೇಕು. ಸತ್ಯಶುದ್ಧ ಕಾಯಕ ನಮ್ಮದಾಗಬೇಕು. ಬಸವಣ್ಣನವರ ತತ್ವಗಳಲ್ಲಿ ಜಾಗತಿಕ ಕಷ್ಟಗಳಿಗೆ ಪರಿಹಾರ ಇದೆ ಎಂದು ಅಭಿಪ್ರಾಯಿಸಿದರು.

ಶ್ರೀ ಬಸವ ಮುರುಘೇಂದ್ರ ಸ್ವಾಮಿಗಳು ಮಾತನಾಡಿ, ಸಮಸ್ತ ವೈದ್ಯಕೀಯ ವಿಜ್ಞಾನವನ್ನು ಬಸವಾದಿ ಶರಣರು ಕೊಟ್ಟಿದ್ದಾರೆ. ನಮಗೆ ಭವಿತನ ಇಲ್ಲ. ನಮಗೆ ಸ್ವತಂತ್ರ ಕೊಟ್ಟದ್ದು ಬಸವಾದಿ ಶರಣರು. ಮಾನವ ಪ್ರಾಣಿ ಪಕ್ಷಿಗಳಂತೆ ಜೀವನ ಸಾಗಿಸದೆ ಎದುರಾಗುವ ಸವಾಲು ಸಂಘರ್ಷಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಹೇಳಿದರು.

ಶ್ರೀ ಬಸವ ಕೇತೇಶ್ವರ ಸ್ವಾಮಿಗಳು ಮಾತನಾಡಿದರು. ಟಿ.ಎಸ್.ಎನ್.ಜಯಣ್ಣ, ಕೆಇಬಿ ಷಣ್ಮುಖಪ್ಪ, ಬಾಲಚಂದ್ರಪ್ಪ ಮೊದಲಾದವರು ಭಾಗವಹಿಸಿದ್ದರು.

ತೋಟಪ್ಪ ಉತ್ತಂಗಿ ಮತ್ತು ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಕೆ.ವಿ. ಪ್ರಭಾಕರ್ ಸ್ವಾಗತಿಸಿದರು. ಪ್ರಕಾಶ ದೇವರು ನಿರೂಪಿಸಿದರು. ಚಿನ್ಮಯಿ ದೇವರು ವಂದಿಸಿದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸಮ ಸಮಾಜ ನಿರ್ಮಾಣಕ್ಕೆ ಬದ್ಧರಾಗೋಣ : ಮಾಜಿ ಶಾಸಕ ಎ.ವಿ.ಉಮಾಪತಿ

ಬಸವಣ್ಣ ವಚನ ಹಾಗೂ ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ