Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ತತ್ವ ಸಿದ್ದಾಂತ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಿ : ಎಂ. ಪ್ರೇಮಾವತಿ ಮನಗೋಳಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಏ.28) : ಹನ್ನೆರಡನೆಯ ಶತಮಾನದಲ್ಲಿ ಸಮ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಬಸವಣ್ಣನವರು ಸಾಕಷ್ಟು ವಿರೋಧಗಳನ್ನು ಎದುರಿಸಬೇಕಾಯಿತು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಪ್ರೇಮಾವತಿ ಮನಗೋಳಿ ಹೇಳಿದರು.

ವಕೀಲರ ಸಂಘದ ಉಪಾಧ್ಯಕ್ಷ ಜಿ.ಸಿ.ದಯಾನಂದ ಹಾಗೂ ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಮತ್ತು ವಕೀಲರ ಬಳಗದಿಂದ ಇಲ್ಲಿನ ನ್ಯಾಯಾಲಯದ ಗ್ರಂಥಾಲಯದಲ್ಲಿ ಶುಕ್ರವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣನವರ ಜಯಂತಿಯಲ್ಲಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಬೇರೆಯವರ ತಪ್ಪುಗಳನ್ನು ಎತ್ತಿ ತೋರಿಸುವ ಬದಲು ಮೊದಲು ನಮ್ಮ ತಪ್ಪುಗಳನ್ನು ನಾವು ಸರಿಪಡಿಸಿಕೊಳ್ಳಬೇಕು. ಜಾತಿ ಬೇಧ, ವರ್ಗ ಬೇಧ, ಅಸಮಾನತೆ ವಿರುದ್ದ ಬಸವಣ್ಣನವರು ಸಾಕಷ್ಟು ಹೋರಾಡಿದರು. ಎಲ್ಲಿ ಹೋರಾಟ ಮಾಡಿದರೋ ಅಲ್ಲಿಂದಲೆ ಅವರನ್ನು ಓಡಿಸಲಾಯಿತು. ಆದರೆ ಬಸವಣ್ಣ ವಿರೋಧಗಳನ್ನು ಮೆಟ್ಟಿ ನಿಂತರು. ಅದೇ ರೀತಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಬಲಿಷ್ಠವಾದ ಸಂವಿಧಾನವನ್ನು ನೀಡಿದ್ದಾರೆ. ಹಾಗಾಗಿ ಅವರ ತತ್ವ ಸಿದ್ದಾಂತ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜಯಂತಿಗೆ ನಿಜವಾದ ಅರ್ಥ ಸಿಗುತ್ತದೆ ಎಂದು ತಿಳಿಸಿದರು.

ಸಿವಿಲ್ ಹಿರಿಯ ನ್ಯಾಯಾಧೀಶರಾದ ಕೆಂಪರಾಜು ಮಾತನಾಡಿ ಸಮಾಜ ಸುಧಾರಣೆ, ಬದಲಾವಣೆ ತರುವಲ್ಲಿ ಬಸವಣ್ಣನವರು ಕ್ರಾಂತಿ ಮಾಡಿದ್ದರಿಂದ ವಿಶ್ವಗುರು ಎನಿಸಿಕೊಂಡರು. ಹನ್ನರಡನೆ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿರಬೇಕೆಂಬ ಕಲ್ಪನೆ ಅವರದಾಗಿತ್ತು. ಅಂದಿನ ಅನುಭವ ಮಂಟಪವೇ ಇಂದಿನ ಪಾರ್ಲಿಮೆಂಟ್ ಸಮ ಸಮಾಜ ನಿರ್ಮಾಣ, ಮೂಢನಂಬಿಕೆ ನಿರ್ಮೂಲನೆಗೆ ಬಸವಣ್ಣನವರ ಕೊಡುಗೆ ಅಪಾರ. ಅನುಭವ ಮಂಟಪದಲ್ಲಿ ನಡೆದ ಚರ್ಚೆ ಇಂದು ವಚನಗಳ ಮೂಲಕ ನಮಗೆ ಸಿಕ್ಕಿದೆ. ಎಲ್ಲರೂ ಬಸವಣ್ಣನವರ ವಚನಗಳನ್ನು ಓದಬೇಕಲ್ಲದೆ ಇಂದಿನ ಮಕ್ಕಳಿಗೆ ಬಸವಣ್ಣನವರ ಆಶಯಗಳನ್ನು ತಿಳಿಸಬೇಕು ಎಂದರು.

ಕಾಯಕವೇ ಕೈಲಾಸ. ಕೆಲಸದಲ್ಲಿಯೇ ದೇವರನ್ನು ಕಾಣಬೇಕು ಎನ್ನುವ ಸಂದೇಶ ಈಗ ಕಾನೂನಿನಲ್ಲಿದೆ. ಕೆಲಸ ಮಾಡದೆ ಸೋಮಾರಿಗಳಾಗಿರುವವರಿಂದ ಕುಟುಂಬ ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನುಭವ ಮಂಟಪದ ಮೂಲಕ ಮಹಿಳೆಯರಿಗೆ ಪ್ರಾತಿನಿಧ್ಯ ಕೊಟ್ಟಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲಾ ಜಾತಿ ಧರ್ಮಗಳಿಗೂ ಸಮಾನತೆಯನ್ನು ನೀಡಿದ್ದಾರೆ. ಯಾವ ದೇಶದಲ್ಲಿ ಸಂವಿಧಾನ ಬಲಿಷ್ಠವಾಗಿರುತ್ತದೋ ಅಲ್ಲಿ ಸ್ಥಿರ ಆಡಳಿತವಿರುತ್ತದೆ. ಪ್ರಜೆಗಳೆ ಪ್ರಭುಗಳಾಗಬೇಕು ಎಂದು ಅಂಬೇಡ್ಕರ್ ಕನಸು ಕಂಡಿದ್ದರು ಎಂದು ಸ್ಮರಿಸಿದರು.

ಪ್ರಧಾನ ಒಂದನೆ ಅಪರ ಜಿಲ್ಲಾ ನ್ಯಾಯಾಧೀಶರಾದ ಕಲ್ಕಣಿ ಮಾತನಾಡುತ್ತ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣನವರು ತಮ್ಮ ವೈಯಕ್ತಿಕ ಬದುಕುಗಳನ್ನು ಸಮಾಜಕ್ಕಾಗಿ ತ್ಯಾಗ ಮಾಡಿದರು.

ಅಸಮಾನತೆ ವಿರುದ್ದ ಹೋರಾಡಿದ ಈ ಇಬ್ಬರು ಮಹಾನ್ ಪುರುಷರ ವಿಚಾರಗಳನ್ನು ಎಲ್ಲರೂ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾತಿಗಿಂತ ಕೃತಿಗೆ ಹೆಚ್ಚು ಆದ್ಯತೆ ನೀಡಿದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್ ಮಾತನಾಡುತ್ತ ಮಹಾ ಮಾನವತಾವಾದಿ, ಭಕ್ತಿ ಭಂಡಾರಿ ಜಗಜ್ಯೋತಿ ಬಸವೇಶ್ವರರು ಸಮ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿ ಮಾಡಿದಾಗ ಸಾಕಷ್ಟು ಕಷ್ಠ ವಿರೋಧಗಳನ್ನು ಎದುರಿಸಿದರು. ಅವರ ಆದರ್ಶಗಳನ್ನು ನಡೆ ನುಡಿಯಲ್ಲಿ ಪಾಲಿಸೋಣ.

ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದ ಬೇರುಗಳು ಅಲುಗಾಡುತ್ತಿವೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದರಲ್ಲಿ ವಕೀಲರುಗಳ ಪಾತ್ರ ಮುಖ್ಯ. ಕಾನೂನಿಗೆ ಧಕ್ಕೆಯಾದರೆ ಹೋರಾಟಕ್ಕೆ ಇಳಿಯಬೇಕು ಎಂದು ಕರೆ ನೀಡಿದರು.

ವಕೀಲ ಬೀಸ್ನಳ್ಳಿ ಜಯಣ್ಣ ಮಾತನಾಡಿ ಬಾಲ್ಯದಲ್ಲಿಯೇ ಸಾಕಷ್ಟು ಕಷ್ಟ-ಹಿಂಸೆ-ಅವಮಾನ-ಅಸ್ಪøಶ್ಯತೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಎದುರಿಸಿದ್ದರಿಂದ ದೇಶಕ್ಕೆ ಸಂವಿಧಾನವನ್ನು ರಚಿಸಿ ದೊಡ್ಡ ತತ್ವಜ್ಞಾನಿ ಎನಿಸಿಕೊಂಡರು.

ಅದೇ ರೀತಿ ಅಸಮಾನತೆ ವಿರುದ್ದ ಹೋರಾಡಿದ ಬಸವಣ್ಣನವರು ತಮ್ಮ ಕ್ರಾಂತಿಯ ಮೂಲಕ ವಿಶ್ವಗುರುವಾದರು ಇಂತಹ ಇಬ್ಬರು ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ನುಡಿದರು.

ಕಿರಿಯ ವಿಭಾಗ ಒಂದನೆ ಅಪರ ಸಿವಿಲ್ ನ್ಯಾಯಾಧೀಶರಾದ ಅನಿತಕುಮಾರಿ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಸಿ.ದಯಾನಂದ ವೇದಿಕೆಯಲ್ಲಿದ್ದರು.
ಹಿರಿಯ ವಕೀಲರುಗಳಾದ ವೈ.ತಿಪ್ಪೇಸ್ವಾಮಿ, ಮಂಜುನಾಥರೆಡ್ಡಿ, ಎನ್.ಶರಣಪ್ಪ, ಬಿ.ಕೆ.ರಹಮತ್‍ವುಲ್ಲಾ, ನರಹರಿ, ವಿಶ್ವನಾಥ್ ಸೇರಿದಂತೆ ಅನೇಕ ವಕೀಲರುಗಳು ಜಯಂತಿಯಲ್ಲಿ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!