ಸಮ ಸಮಾಜದ ನಿರ್ಮಾಣದ ಕನಸನ್ನು ಕಂಡವರು ಕುವೆಂಪು : ಬಸವ ಪ್ರಭು ಸ್ವಾಮೀಜಿ

ಸುದ್ದಿಒನ್, ಚಿತ್ರದುರ್, ಡಿ,29 : ವಿವಿಧತೆಯಲ್ಲಿ ಏಕತೆ ಹೊಂದಿದ ,ಬಹುಮುಖಿ ಸಂಸ್ಕೃತಿಯ ಸುಂದರ ತಾಣ ಭಾರತ. ಅದು ಸದಾ ಶಾಂತಿಯ ತೋಟವಾಗಿರಬೇಕೆಂಬ ವಿಶ್ವಮಾನವತೆಯ ಮಾನವೀಯ ಪ್ರೀತಿಯ ಹಾಗೂ ಬಂಧುತ್ವದ ಸಂದೇಶ ಕೊಟ್ಟು ಸದಾ ಜನಮಾನಸದಲ್ಲಿ ನಿಲ್ಲುವಂತ ವ್ಯಕ್ತಿತ್ವ ರಾಷ್ಟ್ರಕವಿ ಕುವೆಂಪು ಅವರದಾಗಿದೆ ಎಂದು ದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಮಹಾಸ್ವಾಮಿಗಳವರು ಅಭಿಮಾನದಿಂದ ನುಡಿದರು.

 

ಅವರು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಗರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತವೀರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಸಾನಿಧ್ಯದಲ್ಲಿ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜಯಂತ್ಯುತ್ಸವದ ಸಾನಿಧ್ಯವಸಿ ಮಾತನಾಡಿದರು. ‌ವ್ಯಕ್ತಿ ಜಾತಿಯಿಂದ ದೊಡ್ಡವನಾಗದೆ ತನ್ನ ಕಾರ್ಯ ಸಾಧನೆಯಿಂದ ಜಗಕೆ ಉತ್ತಮ ಕೊಡುಗೆ ನೀಡುವ ಮೂಲಕ ಎತ್ತರಕ್ಕೇರಬೇಕಿದೆ. ಹುಟ್ಟುವಾಗ ವಿಶ್ವಮಾನವತೆ ಹೊಂದುವ ನಾವು ಬೆಳೆದು ಶಿಕ್ಷಣ,ಜ್ಞಾನ ಹೊಂದುತ್ತಾ ಜಾತಿ ಸಂಕೋಲೆಗೊಳಗಾಗುತ್ತಿರುವುದು ವಿಷಾದಕರ. ವಿಶ್ವಮಾನವತೆಯ ದೂರದೃಷ್ಟಿ ಹೊಂದಿದ್ದ ಬಸವಣ್ಣನವರು ಅಸಮಾನತೆ, ಲಿಂಗತಾರತಮ್ಯ, ಮೂಢನಂಬಿಕೆ ಅವೈಜ್ಞಾನಿಕ ಆಚರಣೆಗಳೆಂಬ ಕತ್ತಲೆಯಿಂದ ಬಿಡಿಸಲು ಸೂರ್ಯನೋಪಾದಿಯಲ್ಲಿ ಬಸವಣ್ಣ ಬಂದರು. ಅಂತಹ ವಿಶ್ವ ಮಾನವತೆಯ ತತ್ವ ಹೊಂದಿದ್ದ ಬಸವಣ್ಣನವರ ಪರಿಚಯ ಮುಂಚಿತವಾಗಿ ಆಗಿದ್ದರೆ ನಾನು ಬಸವ ದರ್ಶನಮ್ ನ್ನೂ ರಚಿಸುತ್ತಿದ್ದೆ ಎಂಬುದಾಗಿ ಹೇಳಿದ ಮಾತನ್ನು ಶ್ರೀಗಳವರು ಉದಾರಿಸಿದರು.

ಹಾಗೆಯೇ ಬುದ್ಧ ಬಸವರ ನಂತರ ಅತಿ ಹೆಚ್ಚು ಸಮ ಸಮಾಜದ ನಿರ್ಮಾಣದ ಕನಸನ್ನು ಕಂಡವರು ಕುವೆಂಪು ಅವರು. ಬಸವಣ್ಣನವರ ಮೇಲೆ ಅಗಾಧ ಪ್ರೇಮ ಹೊಂದಿದ್ದ ಅವರು ಹೆಚ್ಚಾಗಿ ಅವರ ಪ್ರಭಾವಕ್ಕೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ಸರ್ವರೂ ಸರ್ವೋದಯ, ವಿಶ್ವಮಾನವ ತತ್ವ ಅಳವಡಿಸಿಕೊಂಡು ಆ ಮೂಲಕ ದ್ವೇಷ ಅಳಿಸಿ ಪ್ರೀತಿ, ಬ್ರಾತೃತ್ವ ಹೊಂದುವುದಕ್ಕಾಗಿ ಅವರು ಹೇಳಿದ್ದು “ಓ ನನ್ನ ಚೇತನ ಹಾಗೂ ನೀ ಅನಿಕೇತನ” ಎಂದು. ಹೀಗಾಗಿ ಅವರಿಗೆ ಅವರ ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ ಎಂಬೆಲ್ಲಾ ಬಿರುದುಗಳು ಪ್ರಾಪ್ತವಾಗಿವೆ. ಅವರ ಬಹುಮುಖ ವ್ಯಕ್ತಿತ್ವಕ್ಕಾಗಿ ಮೊದಲ ಜ್ಞಾನಪೀಠ ಪ್ರಶಸ್ತಿ ಸಂದಾಯವಾಗಿದೆ. ಅವರ ರಾಷ್ಟ್ರಗೀತೆಯ ಪ್ರತಿಯೊಂದು ಸಾಲುಗಳು ಅರ್ಥಪೂರ್ಣವಾಗಿದ್ದು ಅವುಗಳ ಅನುಷ್ಠಾನ ಅನುಸಂಧಾನ ನಮ್ಮದಾಗಬೇಕೆಂದು ಸಲಹೆ ನೀಡಿದರು.

 

ಈ ಸಂದರ್ಭದಲ್ಲಿ ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಆಯುರ್ವೇದ ವೈದ್ಯ ಡಾ. ನವೀನ್ ಸಜ್ಜನ್, ಕವಿ ಹಾಗೂ ಕಂಪ್ಯೂಟರ್ ಮಾಹಿತಿ ತರಬೇತುದಾರ ವಿನಯ್ ಕುಮಾರ್ ಸೇರಿದಂತೆ,ವಿವಿಧ ಗ್ರಾಮದ ಜನರು,ಎಸ್.ಜೆ. ಎಂ ವಿದ್ಯಾಪೀಠದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸಮಾರಂಭದ ಆರಂಭಕ್ಕೆ ವಿದ್ಯಾರ್ಥಿಗಳು ವಚನ, ನಾಡಗೀತೆ ಪ್ರಸ್ತುತಪಡಿಸಿದರು. ಎಸ್.ಜೆ.ಎಂ. ವಿದ್ಯಾಪೀಠದ ಶೈಕ್ಷಣಿಕ ವಿಭಾಗದ ಮುಖ್ಯಸ್ಥರಾದ ಎನ್. ಚೆಲುವರಾಜು ಸ್ವಾಗತಿಸಿದರು .ಅಧ್ಯಾಪಕ ನವೀನ್ ಮಸ್ಕಲ್ ಕಾರ್ಯಕ್ರಮ ನಿರ್ವಹಿಸಿದರು ಮಹಾಂತೇಶ್ ನಿಟುವಳ್ಳಿ ಶರಣು ಸಮರ್ಪಣೆ ಮಾಡಿದರು.

*******

ಇಂದ ಶಿವಶರಣರಾದ ಒಕ್ಕಲಿಗ ಮುದ್ದಣನವರ
(ಶರಣೋತ್ಸವ) ಜಯಂತಿ 30ರಂದು

ಶಿವಶರಣರಾದ ಒಕ್ಕಲಿಗ ಮುದ್ದಣ್ಣನವರ ಜಯಂತಿಯನ್ನು ಡಿಸೆಂಬರ್ 30ರ ಸೋಮವಾರ ಬೆಳಗ್ಗೆ 8:30 ಗಂಟೆಯಿಂದ ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಮುಂಭಾಗದಲ್ಲಿ ಆಯೋಜಿಸಲಾಗಿದೆ.
ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ.ಸಿ. ಕಳಸದ ಅವರ ಅಧ್ಯಕ್ಷತೆಯಲ್ಲಿ ,ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳವರ ಸಾನಿಧ್ಯದಲ್ಲಿ, ಇನ್ನುಳಿದ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನಡೆಯಲಿದೆ ಇಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!