in

ಪುರೋಹಿತಶಾಹಿ ವ್ಯವಸ್ಥೆ ತೊಲಗಿಸಿ ಶೋಷಿತರಿಗೆ ನ್ಯಾಯ ಒದಗಿಸಿಕೊಟ್ಟವರು ಬಸವಣ್ಣ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

suddione whatsapp group join

ದಾವಣಗೆರೆ (ಮೇ.03) : ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ರಾಜ್ಯದ ಕನಸು ಕಂಡು ಅನುಭವ ಮಂಟಪ ಸ್ಥಾಪಿಸಿ ಶೋಷಣೆಗೆ ಒಳಪಟ್ಟ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ದಬ್ಬಾಳಿಕೆ ದೌರ್ಜನ್ಯಗಳಿಂದ ದಮನಿತ ಸಮುದಾಯಗಳನ್ನು ಮುಕ್ತಗೊಳಿಸಲು ಹೋರಾಡಿದ ಮಹಾನ್ ವ್ಯಕ್ತಿ ಹಾಗೂ  ಮೂಢನಂಬಿಕೆ, ಜಾತಿವ್ಯವಸ್ಥೆ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆಯಂತಹ ಅನಿಷ್ಟ ಆಚರಣೆಗಳನ್ನು ತೊಡೆದುಹಾಕಿ ಕಾಯಕ ಸಮಾನತೆ, ಲಿಂಗ ಸಮಾನತೆ ಸಾರಿದವರು ಅಣ್ಣ ಬಸವಣ್ಣನವರು.

ದೇವರನ್ನು ಕಾಣಲು ಮಧ್ಯವರ್ತಿಗಳನ್ನು ಸಂಪರ್ಕಿಸಬೇಕಾಗುವಂತಹ ಕಾಲದಲ್ಲಿ ನಿಷ್ಕ್ರಿಯ ಕಾಯಕ ಮಾಡುವ ಜೊತೆಗೆ ಮನದಲ್ಲಿಯೇ ದೇವರನ್ನು ಕಾಣಬಹುದು ಎಂದು ತೋರಿಸಿಕೊಟ್ಟರು. ಕಾಯಕದಿಂದ ಬರುವ ಸಂಪತ್ತನ್ನು ತನಗಾಗಿ ಬಳಸುವ ಜೊತೆಗೆ ಸಮಾಜಕ್ಕೂ ಮೀಸಲಿರಿಸಬೇಕು ಎನ್ನುವಂತಹ ದಾಸೋಹದ ಸಿದ್ಧಾಂತವನ್ನು ತಿಳಿಸಿಕೊಟ್ಟು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳ ಫಲ ತಲುಪುವಂತೆ ಮಾಡಬೇಕು ಎಂದು ತಳಪಾಯ ಹಾಕಿಕೊಟ್ಟವರು ಜಗಜ್ಯೋತಿ ಬಸವಣ್ಣನವರು, ಹಾಗಾಗಿ ಎಲ್ಲರೂ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರವೀಂದ್ರನಾಥ್, ಬಸವಣ್ಣನವರು ಹುಟ್ಟದೆ ಇದ್ದರೆ ಎಲ್ಲರೂ ಕೂಡ ಪ್ರಾಣಿ-ಪಶುಗಳಂತೆ ಜೀವನ ನಡೆಸಬೇಕಿತ್ತು, 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಎಲ್ಲರಿಗೂ ನ್ಯಾಯ ದೊರಕಿಸಿ ಕೊಡುವ ಜೊತೆಗೆ ಅಂತರ್ಜಾತಿ ವಿವಾಹವನ್ನು ಪೆÇ್ರೀತ್ಸಾಹಿಸಿ ಸಮಾಜದಲ್ಲಿ ಬೇರೂರಿದ್ದ ಜಾತಿವ್ಯವಸ್ಥೆಯನ್ನು ತೊಲಗಿಸಲು ಶ್ರಮಿಸಿದವರು ಬಸವಣ್ಣನವರು ಎಂದು ಹೇಳಿದರು.

ಸನಾವುಲ್ಲಾ ನವಿಲೆಹಾಳ್ ಬಸವಣ್ಣನವರು ಕುರಿತು ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರ ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ, ಕತ್ತಲೆಯಲ್ಲಿದೆ ಸಮಾಜಕ್ಕೆ ಜ್ಯೋತಿಯಾಗಿ ಬಂದು ಸಮಾಜವನ್ನು ಶುದ್ಧಗೊಳಿಸುವ ಮೂಲಕ ಕಾಯಕದ ಅರಿವನ್ನು ಮೂಡಿಸಿ, ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಲಿಂಗ ಅಸಮಾನತೆ, ಮೌಢ್ಯದ ವಿರುದ್ಧ ಹೋರಾಟ ಮಾಡಿದವರು ಬಸವಣ್ಣನವರು ಎಂದು ಹೇಳಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಹಾನಗರ ಪಾಲಿಕೆ ಮಹಾಪೌರರಾದ ಜಯಮ್ಮ ಗೋಪಿನಾಯ್ಕ್, ಮಾಜಿ ದೂಡಾ ಅಧ್ಯಕ್ಷ  ದೇವರಮನೆ ಶಿವಕುಮಾರ್, ಮಾಜಿ ಮೇಯರ್ ಗಳಾದ ಬಿ.ಜಿ ಅಜಯ್‍ಕುಮಾರ್, ಎಸ್.ಟಿ ವೀರೇಶ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ, ಮಹಾನಗರ ಪಾಲಿಕೆ ಉಪಮೇಯರ್ ಗಾಯಿತ್ರಿಬಾಯಿ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಬಸವಣ್ಣನವರ ಅನುಯಾಯಿಗಳು ಭಾಗವಹಿಸಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ವಿಶ್ವದಲ್ಲೇ ಮೊದಲ ಬಾರಿಗೆ ಬಸವ ಜಯಂತಿ ಆಚರಿಸಿದ ಹೆಗ್ಗಳಿಕೆ ದಾವಣಗೆರೆ ವಿರಕ್ತಮಠ : ಶ್ರೀ ಬಸವಪ್ರಭು ಸ್ವಾಮೀಜಿ ಅವರ ವಿಶೇಷ ಲೇಖನ

ಬುದ್ದ, ಬಸವ, ಅಂಬೇಡ್ಕರ್ ತತ್ವ ಆದರ್ಶಗಳು ಇಂದಿನ ಪರಿಸ್ಥಿತಿಗೆ ಪ್ರಸ್ತುತ : ಶಾಸಕ ಟಿ ರಘುಮೂರ್ತಿ