ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒತ್ತಾಯಿಸಿ ಇಂದು ಸಮಾವೇಶ ನಡೆದಿದೆ. ಈ ಸಮಾವೇಶದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಶಾಸಕ ಬಸನಗೌಡ ಯತ್ನಾಳ್ ಕಿಡಿಕಾರಿದ್ದಾರೆ. ಅವರನ್ನು ಕೆಳಗಿಳಿಸುವ ಶಕ್ತಿ ನನಗಿದೆ ಎಂದಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಕೂಡಲೇ ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ಸಿಎಂ ಸ್ಥಾನದಿಂದ ಬಸವರಾಜ್ ಬೊಮ್ಮಾಯಿ ಅವರನ್ನೇ ಕೆಳಗಿಳಿಸುವ ತಾಕತ್ತು ನನಗಿದೆ. ನಮ್ಮ ಸಮಾಜದ ವಿರುದ್ಧ ಉಲ್ಟಾ ಹೊಡೆದರೆ ಮುಗೀತು. ಈ ಬಗ್ಗೆ ಬೊಮ್ಮಾಯಿ ಅವರಿಗೂ ಅಂಜಿಕೆ ಇದೆ ಎಂದಿದ್ದಾರೆ.
ಇನ್ನು ವಚನಾನಂದ ಸ್ವಾಮೀಜಿ ಬಗ್ಗೆ ಮಾತನಾಡಿ, ಹುಚ್ಚು ಸ್ವಾಮಿ ಬೆನ್ನು ಹತ್ತಿದರೆ ಶಿಗ್ಗಾಂವಿಯಲ್ಲಿ ಬಸವರಾಜ್ ಬೊಮ್ಮಾಯಿ ಉಲ್ಟಾ ಹೊಡೆಯುತ್ತಾರೆ. ಪಂಚಮಶಾಲಿ ಸಮುದಾಯಕ್ಕೆ ಬಂದರೆ ಯಾವುದೇ ಹೊಂದಾಣಿಕೆ ಇಲ್ಲ. ನನ್ನನ್ನು ಸಚಿವರನ್ನಾಗಿ ಮಾಡುತ್ತಿರೋ, ಬಿಡುತ್ತಿರೋ ಗೊತ್ತಿಲ್ಲ. ಆದರೆ ಮೊದಲು ಇದನ್ನು ಮಾಡಿಬಿಡಿ ಎಂದು ಹೇಳಿದ್ದೀನಿ ಎಂದಹ ಬಸನಗೌಡ ಯತ್ನಾಳ್ ಸಿಎಂ ಬಸವರಾಜ್ ಬೊಮ್ಮಾಯಿ ಅವರ ವಿರುದ್ಧ ಆಕ್ರೋಶಗೊಂಡಿದ್ದಾರೆ.