Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾಂಗ್ಲಾದೇಶ vs ಭಾರತ :  ನಿರ್ಣಾಯಕ ಪಂದ್ಯ ; ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ…!

Facebook
Twitter
Telegram
WhatsApp

ಸಾಧಾರಣವಾಗಿ ಬಾಂಗ್ಲಾದೇಶದ ಜೊತೆ ಭಾರತ ಪಂದ್ಯ ಎಂದರೆ ಯಾವುದೇ ಆತಂಕವಿಲ್ಲದೇ  ಗೆಲ್ಲುತ್ತೇವೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾ ಜೊತೆಗಿನ ಪಂದ್ಯಗಳೂ ಕುತೂಹಲ ಮೂಡಿಸುತ್ತಿವೆ.

ಅಂತಿಮ ಫಲಿತಾಂಶ ಟೀಂ ಇಂಡಿಯಾ ಪರವಾಗಿದ್ದರೂ, ಬಾಂಗ್ಲಾ ಪಂದ್ಯದ ವಿವಿಧ ಹಂತಗಳಲ್ಲಿ ಅನಿರೀಕ್ಷಿತವಾಗಿ ಅಬ್ಬರಿಸಿ ನಮ್ಮ ತಂಡವನ್ನು ಸಂಕಷ್ಟಕ್ಕೀಡು ಮಾಡಬಹುದು. ಈ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ನಲ್ಲಿ ಇಂದು ಉಭಯ ತಂಡಗಳ ನಡುವೆ ಮತ್ತೊಂದು ಮಹತ್ವದ ಕದನಕ್ಕೆ ವೇದಿಕೆ ಸಜ್ಜಾಗಿದೆ.

ಈ ಪಂದ್ಯದಲ್ಲಿ ಭಾರತ ಗೆದ್ದರೆ ಸೆಮಿಸ್ ತಲುಪುವುದು ಬಹುತೇಕ ಖಚಿತವಾಗಿದ್ದು, ಚಿಕ್ಕ ತಂಡಗಳ ವಿರುದ್ಧ ಎರಡು ಗೆಲುವು ಸಾಧಿಸಿರುವ ಬಾಂಗ್ಲಾದೇಶ ಭಾರತದ ವಿರುದ್ಧದ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.

ಪಂತ್ ಗೆ ಅವಕಾಶ!
ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಕೊಹ್ಲಿ ಮತ್ತು ಸೂರ್ಯಕುಮಾರ್ ಎರಡು ಅದ್ಭುತ ಇನ್ನಿಂಗ್ಸ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ರೋಹಿತ್ ನೆದರ್ಲೆಂಡ್ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಆದರೆ ಕೆಎಲ್ ರಾಹುಲ್ ಟೂರ್ನಿಯಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.  ಸತತ ಮೂರು ಪಂದ್ಯಗಳಲ್ಲಿ 4, 9, 9 ರನ್ ಗಳಿಸಿದರು. ಆದರೆ, ರಾಹುಲ್ ಅವರ ಕ್ಷಮತೆ ನಮಗೆ ತಿಳಿದಿದೆ ಮತ್ತು ಅವರನ್ನು ತಂಡದಿಂದ ಹೊರಗಿಡುವ ಪ್ರಶ್ನೆಯೇ ಇಲ್ಲ ಎಂದು ಕೋಚ್ ದ್ರಾವಿಡ್ ಹೇಳಿದ್ದಾರೆ.

ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ  ಗಾಯದ ತೊಂದರೆ ಇದ್ದರೂ ಇನ್ನೂ ಅವರ ಆಟದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾರ್ತಿಕ್ ಗೆ ಆಡುವ ಬದಲು ಅವಕಾಶಕ್ಕಾಗಿ ಕಾಯುತ್ತಿರುವ ಪಂತ್ ಗೆ ಅವಕಾಶ ನೀಡುವುದು ಸರಿಯಾದ ನಿರ್ಧಾರ ಎನ್ನಬಹುದು.  ಬೌಲಿಂಗ್ ನಲ್ಲಿ ಮೂವರು ಸಾಮಾನ್ಯ ವೇಗಿಗಳೊಂದಿಗೆ ಅಶ್ವಿನ್ ಸ್ಪಿನ್ನರ್ ಆಗಿ ಮುಂದುವರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಬಂಗ್ಲಾದೇಶದ ಆಟಗಾರರಲ್ಲಿ ಸಾಲಿನಲ್ಲಿ ನಾಲ್ಕು ಎಡಗೈ ಬ್ಯಾಟ್ಸ್‌ಮನ್‌ಗಳಿದ್ದು, ಅಶ್ವಿನ್ ಅವರೇ ಸೂಕ್ತ.

ಬೌಲಿಂಗ್ ಮೇಲೆ ಭರವಸೆ…
ಲೀಗ್ ಹಂತದಲ್ಲಿ ಬಾಂಗ್ಲಾದೇಶ ತಂಡ ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ವಿರುದ್ಧ ಅಲ್ಪ ಅಂತರದಿಂದ ಗೆದ್ದಿದ್ದು, ಉತ್ತಮ ಬೌಲಿಂಗ್ ನಿಂದಾಗಿ ಆ ಎರಡು ಗೆಲುವುಗಳು ಬಂದಿವೆ. ಅದರಲ್ಲೂ ವೇಗಿ ತಸ್ಕೀನ್ ಅಹ್ಮದ್ ತಂಡದ ಹೊಣೆ ಹೊತ್ತಿದ್ದಾರೆ.  ಮುಸ್ತಾಫಿಜುರ್ ಫಾರ್ಮ್‌ಗೆ ಮರಳಿರುವುದು ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಹಸನ್ ಮಹಮೂದ್ ಕೂಡ ಪ್ರಮುಖ ವೇಗಿ. ಆಫ್ಸ್ಪಿನ್ನರ್ ಮೊಸಾದಿಕ್ ಕೂಡ ಪ್ರಭಾವ ಬೀರಬಹುದು. ಆದರೆ ಅವರೆಲ್ಲರಿಗೂ ಬಲಿಷ್ಠ ಭಾರತೀಯ ತಂಡದ ಆಟಗಾರರ ಬ್ಯಾಟಿಂಗ್‌ನ್ನು ನಿಯಂತ್ರಿಸುವುದು ಸುಲಭವಲ್ಲ.  ಬ್ಯಾಟಿಂಗ್‌ನಲ್ಲಿ ತಂಡ ದುರ್ಬಲವಾಗಿದೆ. ನಜ್ಮುಲ್, ಲಿಟನ್, ಸರ್ಕಾರ್ ಮತ್ತು ಅಫೀಫ್ ಅವರ ಪ್ರದರ್ಶನದ ಮೇಲೆ ತಂಡದ ಅವಕಾಶಗಳು ಅವಲಂಬಿತವಾಗಿವೆ.  ಎಲ್ಲಕ್ಕಿಂತ ಮಿಗಿಲಾಗಿ ನಾಯಕ ಶಕೀಬ್ ಫಾರ್ಮ್ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಮೇಲಾಗಿ ‘ನಾವು ವಿಶ್ವಕಪ್ ಗೆಲ್ಲಲು ಬಂದಿಲ್ಲ’ ಎಂಬ ಅವರ ಹೇಳಿಕೆ ತಂಡದ ಆತ್ಮಸ್ಥೈರ್ಯಕ್ಕೆ ಧಕ್ಕೆ ತರಲಿದೆ.

ಪಿಚ್ ಮತ್ತು ವಾತಾವರಣ
ಅಡಿಲೇಡ್ ಓವಲ್‌ನಲ್ಲಿ ಬೆಳಿಗ್ಗೆಯಿಂದ ಮಳೆಯಾಗುತ್ತಿಲ್ಲ ಮತ್ತು ಹವಾಮಾನವು ಗಣನೀಯವಾಗಿ ಸುಧಾರಿಸಿದೆ. ತುಂಬಾ ಚಳಿ ಇದೆ.ಆದರೆ ಇಂದಿನ ಹವಾಮಾನ ಮುನ್ಸೂಚನೆಯು ‘ಮಳೆ ಇಲ್ಲ’ ಎಂದು ತಿಳಿಸಿದೆ. ಅಡಿಲೇಡ್ ಓವಲ್ ಮೈದಾನವು  ಬ್ಯಾಟಿಂಗ್ ಪಿಚ್ ಇದಾಗಿದ್ದು, ದೊಡ್ಡ ಮೊತ್ತದ ರನ್ ಗಳಿಸಲು ಸಾಧ್ಯ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಬಹುದು.

ಟಿ20ಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ 11 ಪಂದ್ಯಗಳು ನಡೆದಿದ್ದು, 10ರಲ್ಲಿ ಭಾರತ ಗೆದ್ದಿದೆ. ಉಭಯ ತಂಡಗಳು 2016ರಲ್ಲಿ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಅಂದು ನಡೆದ ಅದ್ಭುತ ಪಂದ್ಯದಲ್ಲಿ ಭಾರತ ಒಂದು ರನ್ ಅಂತರದಿಂದ ಗೆದ್ದಿತ್ತು. 5 ಎಸೆತಗಳಲ್ಲಿ 10 ರನ್ ಗಳಿಸಬೇಕಿದ್ದ ಬಾಂಗ್ಲಾದೇಶ ಸತತ 2 ಬೌಂಡರಿ ಬಾರಿಸಿ ಭಾರತ ಮುಂದಿನ 3 ಎಸೆತಗಳಲ್ಲಿ ಒಂದೂ ರನ್ ನೀಡದೆ 3 ವಿಕೆಟ್ ಕಬಳಿಸಿದ್ದನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ.

ಇಂದಿನ ಪಂದ್ಯದ ವಿಜೇತರು ಈ ವಿಶ್ವಕಪ್‌ನ ಸೆಮಿಫೈನಲ್ ರೇಸ್‌ನಲ್ಲಿ ಸ್ಥಾನ ಪಡೆಯುತ್ತಾರೆ. ಸೋತವರು ವಿಶ್ವ ಕಪ್ ನಿಂದ ನಿರ್ಗಮಿಸುವ ಸಾಧ್ಯತೆಯಿದೆ.
ಆದ್ದರಿಂದ ಇಂದಿನ ಪಂದ್ಯ ಎರಡೂ ತಂಡಗಳಿಗೂ ನಿರ್ಣಾಯಕ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!