ಶಿವಮೊಗ್ಗ : ಸೊರಬ ಕ್ಷೇತ್ರ ಮೊದಲಿನಿಂದಲೂ ಬಂಗಾರಪ್ಪ ಕುಟುಂಬದ ಹಿಡಿತದಲ್ಲಿದೆ. ಬಂಗಾರಪ್ಪ ಅವರ ನಿಧನದ ನಂತರ ಮಕ್ಕಳು ವಿರೋಧ ಸ್ಪರ್ಧೆ ಒಡ್ಡಿದ್ದಾರೆ. ಇಬ್ಬರ ನಡುವೆ ಆಗಾಗ ಸ್ಪರ್ಧೆ ಎದುರಾಗುತ್ತಲೇ ಇರುತ್ತದೆ. ಇದೀಗ ಚುನಾವಣೆ ಸಮೀಪಿಸುತ್ತುರುವಾಗಲೇ ಮತ್ತೊಮ್ಮೆ ಸಹೋದರರ ಸವಾಲು ಆರಂಭಗೊಂಡಿದೆ. ಇದಕ್ಕೆ ಕಾರಣ ಇಂದು ಕುಮಾರ ಬಂಗಾರಪ್ಪ ತಮ್ಮ ಸೋದರ ಮಧು ಬಂಗಾರಪ್ಪ ವಿರುದ್ಧ ರಾಜಕೀಯ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಮಧು ಬಂಗಾರಪ್ಪ ಅಧಿಕಾರವಾಧಿಯಲ್ಲಿ ಸೊರಬ ತಾಲೂಕಿನಲ್ಲಿ ಬಕರ್ ಹುಕುಂ ಭ್ರಷ್ಟಚಾರ ನಡೆದಿದೆ. 101% ನಾನು ಹೇಳುತ್ತೇನೆ. ಮಧು ಬಂಗಾರಪ್ಪ ಕಾಂಗ್ರೆಸ್ ನಲ್ಲಿ ಉಳಿಯಲ್ಲ. ಮುಂದಿನ ಚುನಾವಣೆ ಅಷ್ಟರಲ್ಲಿ ಯಾವ ಪಕ್ಷ ಸೇರುತ್ತಾರೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್ಸಿಗರಿಗೆ ರಸ್ತೆ ಸೇತುವೆ ಮಾಡಿದರೂ ಸಮಾಧಾನವಾಗುವುದಿಲ್ಲ, ಪೆಟ್ರೋಲ್ ಬೆಲೆ ಕಡಿಮೆ ಮಾಡಿದರೂ ಸಂತೋಷವಾಗುವುದಿಲ್ಲ, ಉಕ್ರೇನ್ ನಿಂದ ವಿದ್ಯಾರ್ಥಿಗಳನ್ನು ಕರೆತಂದರೂ ಸಂತೋಷವಾಗುವುದಿಲ್ಲ. ಪ್ರಧಾನಿ ಮೋದಿ ಹೇಳಿದ್ದು ಸತ್ಯ. ಮಧು ಬಂಗಾರಪ್ಪ ಗ್ಯಾಂಗ್ ಸ್ಟಾರ್ಸ್ ಇದ್ದಂಗೆ ಎಂದಿದ್ದಾರೆ.

ಇನ್ನು ಬಂಗಾರಪ್ಪ ಅವರ ಸಮಾಧಿ ಬಗ್ಗೆ ಆಕ್ರೋಶ ಹೊರ ಹಾಕಿದ್ದು, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ತಂದೆಯ ಸಮಾಧಿ ಕಟ್ಟಲು ಅನುದಾನವನ್ನು ನೀಡಿದ್ದರು. 10 ವರ್ಷಗಳೇ ಕಳೆಯುತ್ತಿವೆ ತಂದೆಯವರ ಸಮಾಧಿಯನ್ನು ಇನ್ನು ಮಾಡುತ್ತಾ ಇದ್ದಾರೆ. ತಂದೆ ಸಮಾಧಿ ಮಾಡಲು ಯೋಗ್ಯವಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

