ಬೆಂಗಳೂರು: ಸಿಲಿಕಾನ್ ಸಿಟಿ ದಿನೇ ದಿನೇ ಇನ್ನಷ್ಟು ದೊಡ್ಡದಾಗಿ ಬೆಳೆಯುತ್ತಿದೆ. ಜೀವನ ಕಟ್ಟಿಕೊಳ್ಳಲು ಬರುವ ಜನರೇನು ಕಡಿಮೆ ಇಲ್ಲ. ಜನಸಂಖ್ಯೆ, ವಾಹನ ಸಂಖ್ಯೆ ಹೆಚ್ಚಾಗಿರುವ ಕಾರಣ ಟ್ರಾಫಿಕ್ ಸಮಸ್ಯೆಯೂ ಅಷ್ಟೇ ಹೆಚ್ಚಾಗಿದೆ. ನಗರದೊಳಗಡೆ ಅದಕ್ಕೆ ಮೆಟ್ರೋ ಸಂಚಾರ ಪರಿಹಾರವಿದೆ. ಆದರೆ ಪ್ರತಿನಿತ್ಯ ಏರ್ಪೋರ್ಟ್ ಗೆ ಹೋಗುವ ಮಾರ್ಗವೇ ಹೆಚ್ಚು ಟ್ರಾಫಿಕ್. ಅದಕ್ಕೊಂದು ಸಿಹಿ ಸುದ್ದಿ ನೀಡಿದೆ ಕೇಂದ್ರ ಸರ್ಕಾರ.
ಮೆಜೆಸ್ಟಿಕ್ ನಿಂದ ಕೆಂಪೇಗೌಡ ಏರ್ಪೋರ್ಟ್ ಗೆ ನೇರವಾಗಿ ಸಂಪರ್ಕ ಕಲ್ಪಿಸುವ ಮಹತ್ವಕಾಂಕ್ಷೆಯ ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅಧಿಕೃತ ನಿಶಾನೆ ತೋರಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ ಈ ನಿರ್ಣಾಯಕ ಹಂತಕ್ಕೆ ಸುಮಾರು 4,100 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಈ ಸಂಬಂಧ ವಿ ಸೋಮಣ್ಣ ಮಾತನ್ನಾಡಿದ್ದು, ಹಿಂದೆ ನಾನು ರಾಜ್ಯ ಮೂಲಸೌಕರ್ಯ ಸಚಿವನಾಗಿದ್ದಾಗ ಮತ್ತು ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗಲೇ ಪ್ರಧಾನಮಂತ್ರಿಗಳ ಬಳಿ ಈ ಬಗ್ಗೆ ಮನವಿ ಮಾಡಿದ್ದೆವು. ಈಗ ಈ ಯೋಜನೆಗೆ ಒಂದು ಲಾಜಿಕಲ್ ಎಂಡ್ ತರುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತುಕತೆ ನಡೆಸಿವೆ ಎಂದಿದ್ದಾರೆ.
ಈ ರೈಲು ಮಾರ್ಗವು ಒಟ್ಟು 8.5 ಕಿ.ಮೀ ಉದ್ಧದ ಹೊಸ ಜೋಡಣೆಯನ್ನು ಒಳಗೊಂಡಿರಲಿದ್ದು, ಈ ಕೆಳಗಿನ ಪ್ರಮುಖ ನಿಲ್ದಾಣಗಳ ಮೂಲಕ ಸಾಗಲಿದೆ. ಕೆಎಸ್ಆರ್ ಬೆಂಗಳೂರು ಸಿಟಿಯಿಂದ ಆರಂಭವಾಗಲಿದೆ. ಯಶವಂತಪುರ ಮತ್ತು ಯಲಹಂಕ ಮೂಲಕ ಸಂಚಾರ ನಡೆಸಲಿದೆ. ಟ್ರಂಪೆಟ್ ಇಂಟರ್ ಚೇಂಜ್ ಬಳಿ ಇರುವ ಪಡೆದು ರೈಲು ಮಾರ್ಗ ಬದಲಾವಣೆಯಾಗಲಿದೆ. ಬಿಕೆ ಹಳ್ಳಿ ಹಾಗೂ ಏರೋಸ್ಪೇಸ್ ಪಾರ್ಕ್ ಮೂಲಕ ಸಾಗಿ ದೇವನಹಳ್ಳಿ ಏರ್ಪೋರ್ಟ್ ಟರ್ಮಿನಲ್ ತಲುಪಲಿದೆ.






