ಬೆಂಗಳೂರು ನಮ್ಮ ಮೆಟ್ರೋದಲ್ಲಿ 58 ಪೋಸ್ಟ್ ಗಳಿಗೆ ಅರ್ಜಿ ಆಹ್ವಾನ

suddionenews
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆಗೆ ಒಂದು ಹಂತದ ನಾಂದಿ ಹಾಡಿದೆ ನಮ್ಮ ಮೆಟ್ರೋ. ಬೆಂಗಳೂರಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸಾರಿಗೆ ಸಂಸ್ಥೆ ಇದು. ಜಿಲ್ಲೆ ಜಿಲ್ಲೆಗಳಿಗೂ ನಮ್ಮ ಮೆಟ್ರೋ ವಿಸ್ತರಣೆಯಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. 58 ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕೆಲಸ ಹುಡುಕುತ್ತಿರುವವರಿಗೆ ಒಂದೊಳ್ಳೆಯ ಅವಕಾಶವಾಗಿದೆ. ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಹ ಅಭ್ಯರ್ಥಿಗಳು, ಆಸಕ್ತರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಉತ್ತಮ ಸಂಬಳ ಅಂತು ಸಿಕ್ಕೆ ಸಿಗಲಿದೆ. ಒಟ್ಟು 58 ಪೋಸ್ಟ್ ಗಳಿದ್ದು, ಬೆಂಗಳೂರಿನಲ್ಲಿ ಕೆಲಸ ಸಿಗಲಿದೆ. ಸಹಾಯಕ ಭದ್ರತಾ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಈ ಹುದ್ದೆಗೆ ಇರುವ ಸಂಬಳ30 ಸಾವಿರದಿಂದ 32 ಸಾವಿರ ಇದೆ.

ಆಯ್ಕೆ ಪ್ರಕ್ರಿಯೆಯೂ ದೈಹಿಕ ಪರೀಕ್ಷೆ, ಹುದ್ದೆಗೆ ಬೇಕಾದ ಅರ್ಹತೆ, ಅನುಭವ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. english.bmrc.co.in ವೆಬ್​​ಸೈಟ್​ಗೆ ಭೇಟಿ ನೀಡಬೇಕು. ಬಳಿಕ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಬಹುದು. ನಂತರ ಆನ್​ಲೈನ್​ನಲ್ಲಿ ಹಾಕಿದ ಪ್ರತಿ ಹಾಗೂ ಸಂಬಂಧಿತ ದಾಖಲೆಗಳಿಗೆ ಸೆಲ್ಫ್ ಅಟೆಸ್ಟೆಡ್ ಮಾಡಿ ಕಾಪಿಗಳನ್ನು ಕಚೇರಿಗೆ ಕಳುಹಿಸಬೇಕು.

ಜನರಲ್ ಮ್ಯಾನೇಜರ್ (ಹೆಚ್​ಆರ್), ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್​, ಕೆ.ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು- 560027 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಸೆಪ್ಟೆಂಬರ್ 09 ಆಗಿರುತ್ತದೆ.  https://projectrecruit.bmrc.co.in/frmApplFillTab.aspx?ND=82 ಈ ಲಿಂಕ್ ನಲ್ಲಿ ಮಾಹಿತಿ ಲಭ್ಯವಿದೆ.

Share This Article
Leave a Comment

Leave a Reply

Your email address will not be published. Required fields are marked *