ಚಾಮರಾಜನಗರ: ಕುಕ್ಕೆ ಸುಬ್ರಮಣ್ಯದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಜಾತ್ರೆಯಲ್ಲಿ ವ್ಯಾಪಾರ ಮಾಡುವುದಕ್ಕೆ ಅನ್ಯಧರ್ಮದವರಿಗೆ ಅವಕಾಶ ನೀಡಿಲ್ಲ. ದ್ವಾರದಲ್ಲಿಯೇ ಈ ಸಂಬಂಧ ಪಟ್ಟ ಬ್ಯಾನರ್ ಒಂದನ್ನು ಅಳವಡಿಸಲಾಗಿದೆ. ಅನ್ಯಧರ್ಮೀಯರ ವ್ಯಾಪಾರವನ್ನು ನಿಷೇಧಿಸಲಾಗಿದೆ ಎಂದು ಬ್ಯಾನರ್ ಹಾಕಿದ್ದಾರೆ. ಈ ಸಂಬಂಧ ಮಾತನಾಡಿರು ಪ್ರಮೋದ್ ಮುತಾಲಿಕ್ ಇಂಥ ವಿಚಾರಕ್ಕೆ ನನ್ನದು ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಮುತಾಲಿಕ್, ಎಲ್ಲಾ ದೇವಾಲಯಗಳಲ್ಲೂ ಹಿಂದೂಯೇತರ ವ್ಯಾಪಾರವನ್ನು ನಿಷೇಧಿಸಬೇಕು. ದೇವಾಲಯಗಳ ನೂರು ಮೀಟರ್ ಅಂತರದಲ್ಲಿ ಹಿಂದೂಯೇತರರಿಗೆ ಅವಕಾಶ ನೀಡಬಾರದು. ವ್ಯಾಪಾರ ಮಾಡಬಾರದು ಎಂಬ ನಿಯಮವಿದೆ. ಅದನ್ನು ಕಟ್ಟು ನಿಟ್ಟಾಗಜ ಜಾರಿಗೆ ತರಬೇಕು. ಕುಕ್ಕೆ ಸುಬ್ರಮಣ್ಯದಲ್ಲಿ ಹಾಕಿರುವ ಬ್ಯಾನರ್ ವಿಚಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
ನಮ್ಮ ದೇಶದಲ್ಲಿಯೇ ಹುಟ್ಟಿ, ನಮ್ಮದೇ ದೇಶದ ಅನ್ನ ತಿಂದು, ನಮ್ಮದೇ ದೇವಾಲಯದಲ್ಲಿ ಬಾಂಬ್ ಇಡುವ ದುಷ್ಟರ ವಿರುದ್ಧ ನಮ್ಮ ಹೋರಾಟ ನಡೆಯುತ್ತದೆ. ಇಲ್ಲಿಯ ತನಕ ಹಿಂದೂ ಸಂಘಟನೆ ಶಾಂತಿಯಿಂದ ನಡೆದುಕೊಂಡಿದೆ. ಅದನ್ನು ದುರುಪಯೋಗ ಪಡಿಸಿಕೊಂಡ ಮುಸ್ಲಿಂರಿಗೆ ವ್ಯಾಪಾರ ನಿಷೇಧವೇ ಸರಿ ಎಂದಿದ್ದಾರೆ.