BBC ನಿರ್ಮಿಸಿರುವ ಮೋದಿ ಅವರ ಸಾಕ್ಷ್ಯ ಚಿತ್ರಕ್ಕೆ ನಿರ್ಬಂಧ : ಅಷ್ಟಕ್ಕೂ ಅದರಲ್ಲಿರುವ ವಿಚಾರವೇನು..?

 

 

ನವದೆಹಲಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ಮೋದಿಗೆ ಸಂಬಂಧಿಸಿದಂತೆ ಡಾಕ್ಯೂಮೆಂಟ್ರಿ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿರುವುದು ಬಿಬಿಸಿ.

ಆದರೆ ಈ ಸಾಕ್ಷ್ಯಚಿತ್ರವನ್ನು ಎಲ್ಲೆಡೆ ನಿರ್ಬಂಧ ಹೇರಲಾಗಿದೆ. ಭಾರತದಲ್ಲೂ ನಿರ್ಬಂಧ ಹೇರಿದ್ದಾರೆ. ಈ ಚಿತ್ರ ಸಾಕಷ್ಟು ಯೂಟ್ಯೂಬ್ ಹಾಗೂ ಟ್ವಿಟ್ಟರ್ ಗಳಲ್ಲಿ ವಿಡಿಯೋ ಓಡಾಡಿತ್ತು. ಈಗ ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲೂ ಈ ವಿಡಿಯೋಗಳಿಗೂ ಬ್ರೇಕ್ ಹಾಕಲಾಗಿದೆ.

 

ವಿರೋಧದ ನಡುವೆಯೂ ಕೇರಳದಲ್ಲೂ ಪ್ರದರ್ಶನವಾಗಿದೆ. ಸಾರ್ವಜನಿಕ ಪ್ರದೇಶ, ಕಾಲೇಜುಗಳಲ್ಲಿ ಸಿಪಿಎಂ ಘಟಕ ಸಾಕ್ಷ್ಯ ಚಿತ್ರವನ್ನು ಪ್ರದರ್ಶನಕ್ಕೆ ಮುಂದಾಗಿದೆ. ಅಷ್ಟೇ ಅಲ್ಲ ನಿನ್ನೆ JNu ವಿವಿಯಲ್ಲಿ ಸಾಕ್ಷ್ಯ ಚಿತ್ರ ಪ್ರದರ್ಶನದ ಪ್ರಯತ್ನ ನಡೆಯಲಾಗಿದೆ. ಕರೆಂಟ್ ಕಟ್ ಮಾಡಲಾಗಿತ್ತು, ಇಂಟರ್ ನೆಟ್ ಕಟ್ ಮಾಡಲಾಗಿತ್ತು. ಆದರೂ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಮೂಲಕ ಕ್ಯೂ ಆರ್ ಕೋಡ್ ಬಳಸಿ ಸಾಕ್ಷ್ಯ ಚಿತ್ರ ನೋಡಲಾಗಿದೆ. ದೇಶದ ಕೆಲವು ವಿವಿಗಳಲ್ಲಿ ಸಾಕ್ಷ್ಯ ಚಿತ್ರ್ಯ ಪ್ರದರ್ಶನ ಕಾಣಯತ್ತಿದೆ.

ಗುಜರಾತ್ ಗಲಭೆ ಆಧರಿಸಿದ ಸಾಕ್ಷ್ಯಚಿತ್ರ ಇದಾಗಿದೆ. 2002ರಲ್ಲಿ ನಡೆದಿದ್ದಂತ ಗಲಭೆ ಅದು. ಆಗ ಪ್ರಧಾನಿ ಮೋದಿ ಅವರು ಗುಜರಾತ್ ಸಿಎಂ ಆಗಿದ್ದರು. ಹೀಗಾಗಿ ಈ ಸಾಕ್ಷ್ಯಚಿತ್ರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಇದಕ್ಕೆ ನಿರ್ಬಂಧ ಹೇರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *