40 ವರ್ಷದ ಒಳಗಿನ ಬೈಕ್ ಸವಾರರನ್ನು ನಿರ್ಬಂಧ : ADGP ಅಲೋಕ್ ಕುಮಾರ್

1 Min Read

ಶಿವಮೊಗ್ಗ: ಜಿಲ್ಲೆಯಲ್ಲಿ ವಾತಾವರಣ ಉದ್ವಿಗ್ನಗೊಂಡಿದೆ. ವೀರ ಸಾವರ್ಕರ್ ಹಾಗೂ ಟಿಪ್ಪು ಫೋಟೋ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದಿದ್ದಾರೆ. ಇದೀಗ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ.

ಈ ಸಂಬಂಧ ADGP ಅಲೋಕ್ ಕುಮಾರ್ ಮಾತನಾಡಿದ್ದು, ಆಗಸ್ಟ್ 18ರ ತನಕ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ‌ ಮಾಡಲಾಗಿದೆ. 40 ವರ್ಷದ ಒಳಗಿನ ಬೈಕ್ ಸವಾರರನ್ನು ನಿರ್ಬಂಧ ಮಾಡಲಾಗಿದೆ. ಹಿರ ಜಿಲ್ಲೆಯಿಂದಲೂ ಪೊಲೀಸರನ್ನು ಕರೆತೆಲಾಗಿದೆ. ಎಲ್ಲಾ ರೀತಿಯ ಬಿಗಿಭದ್ರತೆ ಮಾಡಲಾಗಿದೆ.

ಈಗಾಗಲೇ ಈ ಪ್ರಕರಣದಲ್ಲಿ ಅರೆಸ್ಟ್ ಆದ ನದೀಮ್ ಹಳೇ ಪ್ರಕರಣವು ಇದೆ. ಈತ ಗಣೇಶ ಮೆರವಣಿಗೆ ವೇಳೆ ಚಪ್ಪಲಿ ಎಸೆದಿದ್ದ. ಪ್ರೇಮ್ ಸಿಂಗ್ ಗೆ ಚಾಕು ಹಾಕಿದ್ದು ಜಬೀವುಲ್ಲಾ. ಜಬೀವುಲ್ಲಾ ಮೇಲೆ ದರೋಡೆ, ರಾಬರಿ‌ ಕೇಸ್ ಇದೆ. ಇನ್ನಿಬ್ಬರು ಆರೋಪಿಗಳ ಮೇಲೆ ಯಾವುದೇ ಕೇಸ್ ಇಲ್ಲ. ನಾಲ್ವರನ್ನೂ ಕೂಡ ವಿಚಾರಣೆ ಮಾಡಲಾಗುತ್ತಿದೆ. ಸಂಘಟನೆ, ಕುಮ್ಮಕ್ಕು ನೀಡಿದವರ ಬಗ್ಗೆಯೂ ತನಿಖೆ ನಡೆಯಲಿದೆ. ಇನ್ನುಳಿದವರ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *