ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಮೇ. 28 : ಬಕ್ರೀದ್ ಇಸ್ಲಾಂ ಧರ್ಮದ ಅತ್ಯಂತ ಪವಿತ್ರವಾದ ತ್ಯಾಗ ಮತ್ತು ಬಲಿದಾನದ ಹಬ್ಬವಾಗಿದೆ. ಇದನ್ನು ಪ್ರವಾದಿ ಇಬ್ರಾಹಿಂ ಅವರು ದೇವರಿಗೆ ತೋರಿದ ಅಪಾರ ಭಕ್ತಿ ಮತ್ತು ತ್ಯಾಗದ ಸಂಕೇತವಾಗಿ ವಿಶ್ವದಾದ್ಯಂತ ಮುಸ್ಲಿಮರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಈದ್ಗ ಮೈದಾನದಲ್ಲಿ ನಡೆದ ಬಕ್ರಿದ್ ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಬಕ್ರಿದ್ ಹಬ್ಬದ ಶುಭಕೋರಿ ನಂತರ ಅವರು ಮಾತನಾಡಿ..ಬಕ್ರೀದ್ ಧರ್ಮಗಳ ನಡುವೆ ಸೌಹಾರ್ದ ಮತ್ತು ಗೌರವ ಬೆಳೆಸುವ ಹಬ್ಬವಾಗಿದೆ. ಪರಸ್ಪರ ಮನೆಗಳಿಗೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಮಾಜದ ಬಾಂಧವ್ಯವನ್ನು ಗಟ್ಟಿ ಗೊಳಿಸುತ್ತದೆ. ಇಂದು ದ್ವೇಷ, ವಿಭಜನೆ ಮತ್ತು ಅಸಹಿಷ್ಣುತೆಯ ನಡುವೆ ತ್ಯಾಗ, ಸಹೋದರತ್ವ ಮತ್ತು ಮಾನವ ಸಮಾನತೆಯ ಸಂದೇಶವನ್ನು ಸಾರುತ್ತಿದೆ. ಇಂಥ ಹಬ್ಬವನ್ನು ಇಂದು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಣೆ ಹಬ್ಬದ ಶುಭಾಶಯಗಳು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ.
ತ್ಯಾಗ, ದೇವಭಕ್ತಿ, ಸಹೋದರತ್ವ, ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರುವ ಈ ಹಬ್ಬ ಕೇವಲ ಧಾರ್ಮಿಕ ಆಚರಣೆಯಲ್ಲ, ವಿಶ್ವ ಮಾನವತೆಗೆ ದಾರಿದೀಪವಾಗಿದೆ ಎಂದರು ಹಬ್ಬವನ್ನು ಎಲ್ಲರೂ ಸಡಗರ ಸಂಭ್ರಮದಿಂದ ಶಾಂತಿಯಿಂದ ಆಚರಿಸಿ ಎಂದು ಹಬ್ಬದ ಅಶುಭ ಕೋರಿದರು.
ಈ ಸಂರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಸಿ ಆರ್ ಅಲಾಭಕಾಶ. ಜಾಮಿಯ ಮಸೀದಿ ಅಧ್ಯಕ್ಷ ಯುಕೂಬ್ ಆಲಿ, ಉಪಾಧ್ಯಕ್ಷ ಯೂನಿಸ್ ಮುಸ್ಲಿಂ ಮುಖಂಡರಾದ ಎಸ್ ಮುಜಿಬುಲ್ಲಾ ಎಚ್ಎಸ್ ಸೈಯಾದ್ ಖಲೀಮುಲ್ಲಾ ಸಲೀಂ ಭಾಷಾ, ಜಬಿರ್ ಇಂಜಿನಿಯರ್ ರಾಜ ದಾದಾಪೀರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ ಗ್ಯಾರಂಟಿ ಸಮಿತಿ ಜಿಲ್ಲಾ ಸದಸ್ಯರ ಪ್ರಕಾಶ್ ಮುಖಂಡರಾದ ಹನುಮಂತರಾಯ ಓಬಣ್ಣ ಜೈ ಕುಮಾರ್ ಮೈನಾ ಬಾಬು ಗಿರಿಯಪ್ಪ ಪುರುಷೋತ್ತಮ ಹಾಗೂ ಮುಸ್ಲಿಂ ಬಾಂಧವರು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















