ಬಜರಂಗದಳ ಸೇವಾ ಸಪ್ತಾಹ : ತರಳಬಾಳು ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

1 Min Read

ಸುದ್ದಿಒನ್, ಚಿತ್ರದುರ್ಗ, ಜೂನ್. 30 : ಬಜರಂಗದಳ ಸೇವಾ ಸಪ್ತಾಹದ ಅಂಗವಾಗಿ ವಿಶ್ವಹಿಂದು ಪರಿಷತ್, ಬಜರಂಗದಳದ ವತಿಯಿಂದ ನಗರದ ಹೊರವಲಯದ ತಮಟಗಲ್ಲು ರಸ್ತೆಯಲ್ಲಿರುವ ತರಳಬಾಳು ನಗರದ ಕಡ್ಲೆಬಟ್ಟಿ ಬಳಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಂಯೋಜಕರಾದ ಪ್ರಭಂಜನ್ ಗ್ರಾಮಾಂತರ ಕಾರ್ಯದರ್ಶಿ ಡೈರಿ ಶ್ರೀನಿವಾಸ್ ಹಾಗೂ  ಜಿಲ್ಲಾ ಕಾರ್ಯದರ್ಶಿ ಕೇಶವ್    ಉದ್ಘಾಟಿಸಿದರು.

ಈ ತಪಾಸಣೆಯ  ಪ್ರಮುಖರಾದ ಡಾ. ಯಶಸ್ ಮತ್ತು ತಂಡ ಡಾ. ಶೋಭಾ ಮತ್ತು ಆಯುರ್ವೇದಿಕ್ ಡಾ. ಪ್ರಶಾಂತ್ ಮತ್ತು ತಂಡ ಉಪಸ್ಥಿತಿ ಇದ್ದರು.  ಈ ಆರೋಗ್ಯ ತಪಾಸಣೆಯಲ್ಲಿ 100ಕ್ಕೂ ಹೆಚ್ಚು ರೋಗಿಗಳಿಗೆ ತಪಾಸಣೆ ಮಾಡಿ ಔಷಧಿಗಳನ್ನು ಉಚಿತವಾಗಿನೀಡಿದರು.
ಈ ಆರೋಗ್ಯ ತಪಾಸಣೆಯಲ್ಲಿ ಸಾಮಾನ್ಯ ಚಿಕಿತ್ಸೆ, ಹೃದಯ ಸಂಬಂಧಿತ ಚಿಕಿತ್ಸೆ ( ECG ವ್ಯವಸ್ಥೆ), ಚರ್ಮರೋಗ ಚಿಕಿತ್ಸೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮಾಂತರ ಸಹ ಸಂಚಾಲಕ ದರ್ಶನ್,  ವಿದ್ಯಾರ್ಥಿ ಪ್ರಮುಖರಾದ ತೇಜಸ್, ದಿನೇಶ, ಕಾರ್ಯಕರ್ತರದ ಮಹೇಶ್, ಶ್ರೀನಿವಾಸ್, ಟ್ರ್ಯಾಕ್ಟರ್ ಶಿವಣ್ಣ  ವಿಜಿಯಣ್ಣ, ನಗರ ಅಧ್ಯಕ್ಷರು ಅಶೋಕ್, ಜಿಲ್ಲಾ ಕಾರ್ಯ ಕಾರಣಿ ಸದಸ್ಯರ ವಿಠ್ಠಲ್,   ನಗರ ಸೇವಾ ಪ್ರಮುಖವಾದ ರಘು,  ಬಸವರಾಜ್,  ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *