ನಿನ್ನೆಯೆಲ್ಲಾ ಬಿಜೆಪಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಇಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ರಿಲೀಸ್ ಮಾಡಿ, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಣಾಳಿಕೆ ಬಿಡುಗಡೆ ಮಾಡಿ, ಐದು ಗ್ಯಾರಂಟಿಯನ್ನು ನೀಡಿದೆ. ಅದರಲ್ಲಿ ಭಜರಂಗದಳ ಹಾಗೂ ಪಿಎಫ್ಐ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವ ಸಂಘಟನೆಗಳನ್ನು ನಿಷೇಧ ಮಾಡುವ ನಿರ್ಧಾರವನ್ನು ಸೇರಿಸಿದ್ದಾರೆ.
ಈ ನಿರ್ಧಾರಕ್ಕೆ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದ್ದು, ವಿನಾಶಕಾಲೇ ವಿಪರೀತ ಬುದ್ಧಿ ಎಂಬ ಮಾತಿದೆ. ಅದನ್ನು ಇಂದು ಕಾಂಗ್ರೆಸ್ ಯೋಚನೆ ಮಾಡ್ತಿದೆ. ಪಿಎಫ್ಐ ಅನ್ನು ಈಗಾಗಲೇ ಕೇಂದ್ರ ಸರ್ಕಾರವೇ ಬ್ಯಾನ್ ಮಾಡಿದೆ. ಪಿಎಫ್ಐ ಜೊತೆಗೆ ಭಜರಂಗದಳ ಬ್ಯಾನ್ ಮಾಡ್ತಾರೆ ಅಂತ ಹೇಳ್ತಿದ್ದಾರೆ. ಕಾಂಗ್ರೆಸ್ ಟಾರ್ಗೆಟ್ ಇರುವುದು ಪಿಎಫ್ಐ ಅಲ್ಲ ಭಜರಂಗದಳ. ಈ ಹಿಂದೆ ಮೂರು ಬಾರಿ RSS ನ ಕೂಡ ಬ್ಯಾನ್ ಮಾಡಿತ್ತು. ಭಜರಂಗದಳ ಬ್ಯಾನ್ ಮಾಡಿ ನಿಮ್ಮ ಶಕ್ತಿ ತೋರಿಸಿ. ಏನು ಮಾಡ್ತೀರ ಅಂತ ನಾವೂ ನೋಡ್ತೀವಿ ಎಂದಿದ್ದಾರೆ.
ಇಂಧನ ಸಚಿವ ಸುನೀಲ್ ಕುಮಾರ್ ಆಕ್ರೋಶ ಹೊರ ಹಾಕಿದ್ದು, “ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರವನ್ನು @INCKarnataka ಪ್ರಸ್ತಾಪಿಸಿದೆ.
@DKShivakumar ಹಾಗೂ @siddaramaiah ನವರೇ, ನಾವು #PFI ನಿಷೇಧ ಮಾಡಿದ್ದೇವೆಂಬ ಸಂಕಟ ಹಾಗೂ ದ್ವೇಷವನ್ನು ಭಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದೀರಾ?. ನಿಮ್ಮ ಹಿಂದು ವಿರೋಧಿ ನಿಲುವಿಗೆ ಧಿಕ್ಕಾರ. ಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ.
ಹಿಂದು ಸಮಾಜದ ರಕ್ಷಣೆಗಾಗಿ, ಗೋಮಾತೆಯ ಹಿತಕ್ಕಾಗಿ, ಹಿಂದು ಸೋದರಿಯರ ಮಾನ ಸಮ್ಮಾನ ಸಂರಕ್ಷಣೆಗಾಗಿ ಎಂಥ ತ್ಯಾಗಕ್ಕೂ ಸಿದ್ದವಾಗಿರುವ ಕಾರ್ಯಕರ್ತರ ಪಡೆ. ಮುಸ್ಲಿಂ ಓಲೈಕೆಗಾಗಿ ಭಜರಂಗದಳ ನಿಷೇಧಿಸುತ್ತೇವೆಂಬ ದಾಷ್ಟ್ಯವೇ ? ಎಂದು ಟ್ವೀಟ್ ಮಾಡಿದ್ದಾರೆ.