ಬಾಗಲಕೋಟ : ವಿಕಲಚೇತನ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

suddionenews
1 Min Read

 

ಬಾಗಲಕೋಟ: ವಿಕಲಚೇತನ ನೌಕರರ ಸಂಘ, ಬಾಗಲಕೋಟ ಜಿಲ್ಲಾ ನೂತನ ಪದಾಧಿಕಾರಿಗಳನ್ನು ರವಿವಾರ ನಗರದ ನಂ.15 ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ತುಕರಾಮ.ಎಸ್. ಲಮಾಣಿ,
ಗೌರವಾಧ್ಯಕ್ಷರನ್ನಾಗಿ ಪ್ರಕಾಶ ಬೆಳಗಲಿ, ಕಾರ್ಯದರ್ಶಿಯಾಗಿ ಚಂದ್ರು ಸಿದ್ದಗೊಂಡ, ಖಜಾಂಚಿಯಾಗಿ ಸಂಗಮೇಶ ರೇಶ್ಮಿ,
ಸಂಘಟನಾ ಕಾರ್ಯದರ್ಶಿಯಾಗಿ ಸಂಗಮೇಶ ಶಿರಗುಂಪಿ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ಸಮಯದಲ್ಲಿ ನೂತನವಾಗಿ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳಾಗಿ ಆಯ್ಕೆಯಾದವರನ್ನು ರಾಜ್ಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ‌ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ನಂ.15 ರ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಸ್.ಭಂಗಿ,ವಿಕಲಚೇತನ ನೌಕರರ ಸಂಘದ ಜಮಖಂಡಿ ತಾಲ್ಲೂಕಿನ ಅಧ್ಯಕ್ಷರಾದ ಸಂತೋಷ ಮೂಡಗಿ,ಪ್ರಧಾನ ಕಾರ್ಯದರ್ಶಿ ರಮೇಶ ಝಳಕಿ,ಉಪಾಧ್ಯಕ್ಷರಾದ ವಿಠ್ಠಲ ಕಾಂಬ್ಳೆ,ಸದಸ್ಯರಾದ ಯಮನಪ್ಪ ಗುಡಿಹಿಂದಿನ,ಅಶ್ವಿನಿ ಹಂಚನಾಳ ಸೇರಿದಂತೆ ಅನೇಕರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *