ಬಾಗಲಕೋಟೆ: ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿಯೇ ಬರಬೇಕಿತ್ತು. ಆದರೆ ಮಳೆಯ ಸುಳಿವೇ ಕಾಣಲಿಲ್ಲ. ಹೀಗಾಗಿ ರೈತರು ಕಂಗಲಾಗಿದ್ದಾರೆ. ಮಳೆ ಇಲ್ಲದೆ ಕೃಷಿ ಕೆಲಸಗಳು ನಡೆಯುತ್ತಿಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮುಂಗಾರು ಕೈಕೊಟ್ಟಿದ್ದರಿಂದ ಹೊಲದಲ್ಲಿ ಯಾವುದೇ ಬಿತ್ತನೆ ನಡೆಯದೇ ರೈತರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಹೊಲದಲ್ಲಿ ಕೆಲಸವಿಲ್ಲದೆ ಕೂಲಿಕಾರರು ಪರಿತಪಿಸುತ್ತಿದ್ದಾರೆ. ಹೀಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರಾಮೀಣ ಕೂಲಿಕಾರರು ಪತ್ರ ಬರೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಗುಳೇದ ಗುಡ್ಡ ತಾಲೂಕಿನ ಹಾನಾಪುರ ಎಸ್ಪಿ ಗ್ರಾಮದ ಗ್ರಾಮೀಣ ಕೂಲಿ ಕಾರ್ಮಿಕರು ಪತ್ರ ಬರೆದಿದ್ದಾರೆ. ಮುಂಗಾರು ಕೈಕೊಟ್ಡಿರುವ ಕಾರಷ ನಮಗೆ ಬೇರೆ ಕಡೆಯಲ್ಲೂ ಕೆಲಸ ಸಿಗುತ್ತಿಲ್ಲ. ಯೋಜನೆಯಲ್ಲಿ ಈಗಾಗಲೇ ನೂರು ದಿನ ಕೆಲಸ ಸಂಪೂರ್ಣವಾಗಿದೆ. ಆದರೆ ಇನ್ನೂ ನುರೂ ದಿನ ಮಹಾತ್ಮ ಗಾಂಧಿ ಯೋಜನೆಯಡಿಯಲ್ಲಿಯೇ ಕೆಲಸ ನೀಡಿ ಎಂದು ಕೂಲಿಗಾರರು ಪತ್ರ ಬರೆದಿದ್ದಾರೆ.