ಡೆಹ್ರಾಡೂನ್: ದೇವರ ಭೂಮಿ ಅಂತಾನೇ ಫೇಮಸ್ ಆಗಿರುವ ಉತ್ತರಾಖಂಡ್ ನ ಜೋಶಿಮಠ್ ನಲ್ಲಿ ಜನ ಆತಂಕದಲ್ಲಿದ್ದಾರೆ. ಯಾಕಂದ್ರೆ ವಾಸವಿರುವ ಮನೆಗಳೆಲ್ಲಾ ಬಿರುಕು ಬಿಟ್ಟಿದೆ. ಸುಮಾರು 550ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಪ್ರಾಣ ಉಳಿಸಿಕೊಳ್ಳುವುದಕ್ಕೆ ಜನ ಹರಸಾಹಸ ಪಡುತ್ತಿದ್ದು, ಅಲ್ಲಿಂದ ವಲಸೆ ಹೋಗುತ್ತಿದ್ದಾರೆ.
ಬದರಿನಾಥ್ ಹಾಗೂ ಹೇಮಕುಂಡ್ ಗೆ ಹೋಗುವ ರಸ್ತೆಯಲ್ಲಿ ಎಲ್ಲಿ ನೋಡಿದರು ಬಿರುಕು ಕಾಣಿಸಿಕೊಂಡಿದೆ, ರಸ್ತೆಗಳು, ಮನೆಗಳು ಎಲ್ಲವೂ ಬಿರುಕು ಬಿಟ್ಟಿದೆ. ಚಮೌಲಿಯ 6 ಸಾವಿರ ಎತ್ತರದ ಪ್ರದೇಶದಲ್ಲಿ ಜನ ಪ್ರಾಣ ಉಳಿಸಿಕೊಳ್ಳುವುದಕ್ಕೆ ವಲಸೆ ಹೋಗುತ್ತಿದ್ದಾರೆ. ಸ್ಥಳೀಯರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಯೋಜನೆಗಳಿಂದಾನೇ ಈ ದುಸ್ಥಿತಿ ಬಂದಿರುವುದು ಎಂದು ಜನ ಆರೋಪಿಸಿದ್ದಾರೆ.
ಜೋಶಿ ಮಠ್ ದಲ್ಲಿ ಭೂಮಿ ಕುಸಿಯುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಘಟನೆ ಸಂಬಂಧ ಸಿಎಂ ಪುಷ್ಕರ್ ಸಿಂಗ್ ಧಾಮಿ, ಸಭೆ ನಡೆಸಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ವಿಜ್ಞಾನಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಜನರನ್ನು ರಕ್ಷಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಕೂಡ ನಡೆಸಿದ್ದಾರೆ.